Karaway protest ಬೀದಿದೀಪಗಳನ್ನು ದುರಸ್ಥಿಗೊಳಿಸುವಂತೆ ಕರವೇ ಪ್ರತಿಭಟನೆ
ಹುನಗುಂದ: ಪಟ್ಟಣದ ರಸ್ತೆಯ ಮಧ್ಯದ ಡಿವೈಡರ್ ಬೀದಿದೀಪಗಳು ರಾತ್ರಿ ಸರಿಯಾಗಿ ಬೆಳಗದ ಕಾರಣ ದುರಸ್ಥಿಗೊಳಿಸುವಂತೆ ಅಗ್ರಹಿಸಿ ಕರವೇ ಪದಾಧಿಕಾರಿಗಳು ಪುರಸಭೆ ಎದುರು ಪ್ರತಿಭಟನೆಯನ್ನು ನಡೆಸಿ ಪುರಸಭೆ ಮ್ಯಾನೇಜರ ಎಂ.ಎಸ್.ಕಳ್ಳಿಗುಡ್ಡ ಅವರಿಗೆ ಸೋಮವಾರ ಮನವಿ ನೀಡಿದರು.
ಪಟ್ಟಣದ ಪುರಸಭೆಯ ಆವರಣದಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕರವೇ ಅಧ್ಯಕ್ಷ ರೋಹಿತ ಬಾರಕೇರ ಮಾತನಾಡಿದ ಅವರು, ಪಟ್ಟಣದಲ್ಲಿ ಡಿವೈಡರ್ ಮಧ್ಯದ ಬೀದಿದ್ವೀಪಗಳು ಕಳೆದ ಎರಡು ತಿಂಗಳಿAದ ಬೆಳಕು ನೀಡುತ್ತಿಲ್ಲ. ರಾತ್ರಿ ಸಮಯದಲ್ಲಿ ಪಾದಚಾರಿಗಳು, ಬೈಕ ಸವಾರರು ಕತ್ತಲಲ್ಲಿಯೇ ಜೀವ ಭಯದಲ್ಲಿಯೇ ಓಡಾಡುವ ಪರಸ್ಥಿತಿ ನಿರ್ಮಾಣವಾಗಿದ್ದು ಇದರಿಂದ ಅನೇಕ ಅಪಘಾತಗಳು ಸಂಬವಿಸಿವೆ ಬೀದಿ ದೀಪಗಳನ್ನನು ಸರಿಯಾಗಿ ನಿರ್ವಹಿಸುವ ಗುತ್ತಿಗೆದಾರರ ಕಳೆಪೆ ಮಟ್ಟದ ವಿದ್ಯುತ್ತ ಬಲ್ಪಗಳನ್ನು ಬಳಸುವದರಿಂದ ಪದೇ ಪದೇ ಬಲ್ಪಗಳು ಹೋಗುವದರಿಂದ ಈ ಸಮಸ್ಯೆ ಉಂಟಾಗಿದ್ದು ಅನೇಕ ಸಲ ಮುಖ್ಯಾಧಿಕಾರಿಗಳಿಗೆ ತಿಳಿಸಿದರು ಯಾವುದೇ ಪ್ರಯೋಜನೆ ಯಾಗುತಿಲ್ಲ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿಗಳ ನಿರ್ಲಕ್ಷö??ವೇ ಮುಖ್ಯ ಕಾರಣವಾಗಿದೆ ಆರೋಪಿಸಿದರ.
ಕರವೇ ಪ್ರಧಾನ ಕಾರ್ಯದರ್ಶಿ ಜಹೀರ ಸಂಗಮಕರ ಮಾತಾನಾಡಿ ಮನವಿ ನೀಡಿದ ಎರಡು ದಿನಗಳ ಒಳಗಾಗಿ ಎಲ್ಲ ದ್ವೀಪಗಳು ಬೆಳಗುವಂತೆ ದುರಸ್ಥಿಯನ್ನು ಮಾಡಬೇಕು ಇಲ್ಲವಾದರೆ ಪಟ್ಟಣದ ವಿಜಯ ಮಹಾಂತೇಶ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕರವೇ ಸಂಘಟನೆಯಿAದ ರಸ್ತೆಯನ್ನು ತಡೆದು ಉಗ್ರವಾದ ಹೋರಾಟವನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಪಟ್ಟಣದಲ್ಲಿ ವಾಹನಗಳು ಸಂಚರಿಸುವ ವೇಳೆ ವಾಗನದಹಿಂದ ಅಪಾರವಾದ ದೂಳು ಬರುತ್ತಿದ್ದು ಓಡಾಡುವ ಪ್ರಮಾಣಿಕರಿಗೆ ಸಾರ್ವಜನರಿಕರಿಗೆ ತೀವ್ರತೊಂದರೆ ಉಂಟಾಗುತ್ತಿದೆ ಆದ್ದರಿಂದ ಸ್ವಚ್ಚತೆಯನ್ನು ಪುರಸಭೆಯವರು ಮಾಡಬೆಕೆಂದು ಒತ್ತಾಯಿಸಿದರು.
ಕರವೇ ಮುಖಂಡರಾದ ಮುತ್ತಣ್ಣ ಕಲ್ಮಡಿ, ಹನಮಂತ ಮಾದರ. ಸಂಗು ಮಾದರ, ಮಂಜುನಾಥ ಮುಂಡೇವಾಡಿ, ನಾವಿದ ಸಂದಿಮನಿ, ನಜೀರ ಧನ್ನೂರ
ಸೇರಿದಂತೆ ಇತರರು ಇದ್ದರು.