Inauguration of Art Exhibition ಹನುಮನಾಳ ಎಸ್ ಟಿ ಸರಕಾರಿ ಶಾಲೆಯಲ್ಲಿ ವಸ್ತು ಪ್ರದರ್ಶನ ಉದ್ಘಾಟನೆ
ಇಳಕಲ್ : ತಾಲೂಕಿನ ಗ್ರಾಮೀಣ ಪ್ರದೇಶವಾದ ಹನುಮನಾಳ ಎಸ್ ಟಿ ಗ್ರಾಮದ ಸರಕಾರಿ
ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.
ವಸ್ತು ಪ್ರದರ್ಶನವನ್ನು ಶಾಲಾ ಸುಧಾರಣೆ ಸಮಿತಿಯ ಅಧ್ಯಕ್ಷ ತಿಮ್ಮನಗೌಡ ಪಾಟೀಲ ಕಾರ್ಯಕ್ರಮದ
ಅಧ್ಯಕ್ಷತೆಯನ್ನು ವಹಿಸಿದ್ದರು ಕ್ಷೇತ್ರ ಸಮನ್ವಯಾಧಿಕಾರಿ ಸದಾಶಿವ ಗುಡಗುಂಟಿ ಕಾರ್ಯಕ್ರಮ ಉದ್ಘಾಟಿಸಿ
ಮಾತನಾಡಿ ವಿದ್ಯಾರ್ಥಿಗಳನ್ನು ವಿವಿಧ ಹಂತಗಳಲ್ಲಿ ಅಭಿವೃದ್ಧಿ ಮಾಡಲು ಇಂತಹ ಪ್ರದರ್ಶನಗಳ ಅವಶ್ಯಕತೆ ಇರುತ್ತದೆ ಎಂದು ಹೇಳಿದರು
ಮುಖ್ಯ ಅತಿಥಿಗಳಾಗಿ ಹುನಗುಂದ ಆಲೂರ , ರಾಘವೇಂದ್ರ ಕೆಂಧೂಳಿ ಅಗಮಿಸಿ ಮಾತನಾಡಿದರು.
ಮಹೇಂದ್ರಕುಮಾರ ಬೆನ್ನೂರ ಸ್ವಾಗತಿಸಿದರು ಮುಖ್ಯ ಗುರು ಶರಣಬಸಪ್ಪ ಹವಾಲ್ದಾರ ಪ್ರಾಸ್ತಾವಿಕವಾಗಿ ಮಾತನಾಡಿದರು
ಕುಬೇರ ಹೊಂಗಲ ವಂದಿಸಿದರು ದೀಪಾ ಗೋಟೂರ ನಿರೂಪಿಸಿದರು.