Mehbooba Mulla’s Doctorate ಮೆಹಬೂಬ ಮುಲ್ಲಾಗೆ ಡಾಕ್ಟರೇಟ್ ಪ್ರಧಾನ
ಇಳಕಲ್ : ನಗರದ ಸಂಯುಕ್ತ ಕರ್ನಾಟಕ ಪತ್ರಿಕೆಯ ಏಜೆಂಟ್ ಅಬ್ದುಲಸಾಬ ಮುಲ್ಲಾ ಇವರ ಪುತ್ರ ಮೆಹಬೂಬ
ಮುಲ್ಲಾ ಇವರಿಗೆ ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವತಿಯಿಂದ ಡಾಕ್ಟರೇಟ್ ಪದವಿ ನೀಡಲಾಗಿದೆ.
ಮೆಹಬೂಬ ಮುಲ್ಲಾ ಇವರು ಅರ್ಥ ಶಾಸ್ತ್ರ ವಿಭಾಗದ ನಿವೃತ್ತ ಉಪನ್ಯಾಸಕಿ ಡಾ ಮುಕ್ತಾ ಎಸ್ ಆಡಿ ಇವರ
ಮಾರ್ಗದರ್ಶನದಲ್ಲಿ ಪೆಮಿನೆಜೈಶನ್ ಆಫ್ ಅಗ್ರಿಕಲ್ಚರ್ ಇನ್ ಕರ್ನಾಟಕ ಎ ಸ್ಟಡಿ ಇನ್ ರಾಯಚೂರು
ಡಿಸ್ಟ್ರಿಕ್ಟ್ ಈ ವಿಷಯದ ಮೇಲೆ ಮಂಡಿಸಿದ ಪ್ರಬಂಧಕ್ಕೆ ಡಾಕ್ಟರೇಟ್ ನೀಡಲಾಗಿದೆ.
ಡಿಸೆಂಬರ್ ೩ ರಂದು ಬೆಳಗಾವಿಯಲ್ಲಿ ನಡೆದ ಸಮಾರಂಭದಲ್ಲಿ ಡಾಕ್ಟರೇಟ್ ಪ್ರಧಾನ ಮಾಡಲಾಗಿದೆ.
ಇವರ ಈ ಸಾಧನೆಗೆ ಪ್ರಸ್ತುತ ಶಾಲೆಯ ಹಾಗೂ ಆದರ್ಶ ವಿದ್ಯಾಲಯ ಬೀಳಗಿಯ ಮುಖ್ಯೋಪಾಧ್ಯಯರು,
ಸಿಬ್ಬಂದಿ ವರ್ಗ, Sಆಒಅ ಹಾಗೂ ವಿದ್ಯಾರ್ಥಿಗಳು ಇವರನ್ನು ಅಭಿನಂದಿಸಿದ್ದಾರೆ.
ವರದಿ: ಭೀಮಣ್ಣ ಗಾಣಿಗೇರ (ಇಳಕಲ್ಲ)