associations ಮಹಿಳೆಯರು ಸಂಘಗಳ ಸದುಪಯೋಗ ಪಡೆಯಬೇಕು
ಇಳಕಲ್ : ಮಹಿಳೆಯರು ಗುಂಪು ಸಂಘಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶ್ರೀನಿಧಿ ಸಂಜೀವಿನಿ
ಮಹಿಳಾ ಗ್ರಾಮಪಂಚಾಯತ ಒಕ್ಕೂಟದ ಅಧ್ಯಕ್ಷೆ ಸರಸ್ವತಿ ಈಟಿ ಕರೆಕೊಟ್ಟರು.
ತಾಲೂಕಿನ ನಂದವಾಡಗಿ ಗ್ರಾಮದಲ್ಲಿ ನಡೆದ ಶ್ರೀನಿಧಿ ಸಂಜೀವಿನಿ ಸಂಸ್ಥೆಯ ವರ‍್ಷಿಕ ಸಾಮಾನ್ಯ ಸಭೆಯನ್ನು
ಉದ್ಘಾಟಿಸಿ ಮಾತನಾಡಿದ ಅವರು ಸರಕಾರ ಗುಂಪು ಸಂಘಗಳಿಗಾಗಿ ಸಾಕಷ್ಟು ಸೌಲಭ್ಯ ನೀಡಿದೆ ಅವುಗಳನ್ನು
ಪಡೆದುಕೊಂಡು ಮಹಿಳೆಯರು ಸ್ವತಂತ್ರವಾಗಿ ದುಡಿದು ಸ್ವಾವಲಂಬಿಗಳಾಗಬೇಕು ಎಂದು ಹೇಳಿದರು.
ಸಭೆಯಲ್ಲಿ ಲೆಕ್ಕ ಪತ್ರ ಪರಿಶೋಧನೆ ವರದಿಯನ್ನು ಪರಾರ‍್ಶಿಸಿ ವರ‍್ಷಿಕ ವರದಿಯನ್ನು ಓದಲಾಯಿತು.
ಈ ಸಮಯದಲ್ಲಿ ಸಂಘದ ಪ್ರಧಾನ ಕರ‍್ಯರ‍್ಶಿ ಶರಣಮ್ಮ ಗಂಗಾಪೂರ, ಕೋಶಾಧಿಕಾರಿ ಶರಣಮ್ಮ ತಳವಾರ,
ನರ‍್ದೇಶಕಿಯರಾದ ಅನ್ನಪರ‍್ಣ, ಶಾಂತಾ ಹಿರೇಗೌಡರ, ಲಕ್ಷ್ಮೀ ಮ್ಯಾಗೇರಿ, ಗಂಗಮ್ಮ ಕಾಂಟಾಲಿ, ಅಂಜು ಗಂಗಾಪೂರ,
ಬೇಗಂ ಉಪಸ್ಥಿತರಿದ್ದರು.ಒಕ್ಕೂಟ ಮೇಲ್ವಿಚಾರಕ ಹಾಗೂ ತಾಲೂಕಾ ವ್ಯವಸ್ಥಾಪಕ ರಮೇಶ ಅಂಗಡಿ ಕರ‍್ಯಕ್ರಮ ನಡೆಸಿಕೊಟ್ಟರು