Neelakantheshwar Sangh of Ilakal ಇಳಕಲ್‌ದ ನೀಲಕಂಠೇಶ್ವರ ಸಂಘಕ್ಕೆ ೧೦ ಸ್ಥಾನಗಳು ಅವಿರೋಧವಾಗಿ ಆಯ್ಕೆ
ಇಳಕಲ್ : ಇಲ್ಲಿನ ಕುಲಕರ್ಣಿ ಪೇಟೆಯಲ್ಲಿ ಇರುವ ನೀಲಕಂಠೇಶ್ವರ ರೇಶ್ಮೆ ಕೈಮಗ್ಗದವರ ಸಹಕಾರ ಸಂಘದ
೧೨ ಸ್ಥಾನಗಳಲ್ಲಿ ೧೦ ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿವೆ.
ಸಾಮಾನ್ಯ ಕ್ಷೇತ್ರದಿಂದ ಶೇಖರಪ್ಪ ಪೋಚಗುಂಡಿ ,ಗಂಗಾಧರ ಕುರುಗೋಡ,ಸುರೇಶ ರೊಡ್ಡಾ,
ನಾರಾಯಣಪ್ಪ ಚೇಗೂರ,ಮಾರುತಿ ಗೋಟೂರ, ವಿಜಯ ಬೆನ್ನೂರ, ಮಹಿಳಾ ಕ್ಷೇತ್ರದಿಂದ ರಾಧಾ ಬಂಡಿ ಸರಸ್ವತಿ ಉಪನಾಳ,
ಹಿಂದುಳಿದ ವರ್ಗ ಅ ದಿಂದ ದಶರಥ ಮನ್ನಾಪೂರ ಬ ದಿಂದ ಮಲ್ಲಪ್ಪ ಬಂಡೆಪ್ಪನವರ ಆಯ್ಕೆಯಾಗಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪಂಗಡದ ಎರಡು ಸ್ಥಾನಗಳಿಗೆ ಯಾವುದೇ ನಾಮಪತ್ರಗಳು ಬಂದಿಲ್ಲ
ಎಂದು ಚುನಾವಣಾಧಿಕಾರಿ ಎಸ್ ಎಂ ಕೆಲೂಡಿ ತಿಳಿಸಿದ್ದಾರೆ.