ILKALBANK Urban Bank ಅರ್ಬನ್ ಬ್ಯಾಂಕ್ ಚುನಾವಣೆಯಲ್ಲಿ ಜಯ : ಸ್ನೇಹಬಳಗದಿಂದ ಸತ್ಕಾರ
ಬಾಗಲಕೋಟ : ಜಿಲ್ಲೆಯ ಪ್ರತಿಷ್ಠಿತ ಹಣಕಾಸು ಸಂಸ್ಥೆಗಳಲ್ಲಿ ಒಂದಾದ ಇಳಕಲ್ ಕೋ – ಆಫ್‌ರೇಟಿವ್ ಬ್ಯಾಂಕ್ ಲಿ.
ಇಳಕಲ್ ಇದರ ೨೦೨೫ ರ ನಿರ್ದೇಶಕ ಮಂಡಳಿ ಚುನಾವಣೆ ಜ.೦೫ ರವಿವಾರದಂದು ನಡೆಯಿತು.
ಸತತವಾಗಿ ೫ ನೇ ಬಾರಿಗೆ ಸ್ಪರ್ಧಿಸಿದ್ದ ಅರವಿಂದ ಮಂಗಳೂರು ಅವರು ಚುನಾವಣೆಯಲ್ಲಿ ಜಯಸಾಧಿಸಿ
ಅವರನ್ನು ಸ್ನೇಹಬಳಗದ ಸದಸ್ಯರು ಬುಧವಾರದಂದು ಸತ್ಕರಿಸಿ ಗೌರವಿಸಿದರು.
ಈ ಸಮಯದಲ್ಲಿ ಸ್ಮೇಹಬಳಗದ ಸದಸ್ಯರಾದ ಚಂದ್ರು ಕೊಳ್ಳಿ, ಭೀಮಣ್ಣ ಗಾಣಿಗೇರ,
ಶಿವರಾಜ ವಣಗೇರಿ,ಮಂಜುನಾಥ ಕುಂಬಾರ, ಪ್ರಶಾಂತ ಪತ್ತಾರ, ಹನಮಂತ ಮಡಿವಾಳರ,
ವಿಜೇತ ಕಾಗಿ ಮತ್ತಿತರರು ಇದ್ದರು.