Badami Banashankari ಬಾದಾಮಿ ಬನಶಂಕರಿ ದರ್ಶನ ಪಡೆದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ
ಜಿಲ್ಲೆಯ ಆರಾಧ್ಯದೇವತೆ ಶಕ್ತಿ ಪೀಠಗಳಲ್ಲಿ ಒಂದಾದ ಬಾದಾಮಿ ಬನಶಂಕರಿ ದೇವಿಯ ಜಾತ್ರಾ ನಿಮಿತ್ಯವಾಗಿ ಹುನಗುಂದ
ಮತಕ್ಷೇತ್ರದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಗುರುವಾರದಂದು ದೇವಿಯ ದರ್ಶನವನ್ನು ಪಡೆದುಕೊಂಡರು.
ನಂತರ ಬಾದಾಮಿ ಜಾತ್ರೆಯ ಪ್ರಸಿದ್ಧ ನಾಟಕ ಕಂಪನಿಗಳಲ್ಲಿ ಒಂದಾದ ತೋಂಟದಾರ್ಯ ನಾಟ್ಯ ಸಂಘಕ್ಕೆ ಭೇಟಿ ನೀಡಿ ಕಲಾವಿದರನ್ನು
ಪ್ರೋತ್ಸಾಹಿಸಿದರು. ನಂತರ ನಾಟಕ ಕಲಾವಿದರ ಮಾಜಿ ಶಾಸಕರನ್ನು ಗೌರವಿಸಿ ಸತ್ಕರಿಸಿದರು.
ಈ ಸಮಯದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ, ಮುಖಂಡರಾದ ಅರವಿಂದ ಮಂಗಳೂರು , ಶ್ಯಾಮ್‌ಸುಂದರ ಕರವಾ ,
ಪ್ರವೀಣ ಹಳಪೇಟಿ , ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಮಲ್ಲಿಕಾರ್ಜುನ ಗಡಿಯಣ್ಣವರ ಮತ್ತಿತರರು ಉಪಸ್ಥಿತರಿದ್ದರು.
ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ)