ILKAL ಹುಚ್ಚು ನಾಯಿ ಕಡಿತ ಮಗು ಆಸ್ಪತ್ರೆಗೆ ದಾಖಲು
ಇಳಕಲ್: ಹುಚ್ಚು ನಾಯಿಯೊಂದು ಓಣಿಯಲ್ಲಿ ಮಕ್ಕಳಿಗೆ ಕಚ್ಚುತ್ತಾ ನಡೆದಿದ್ದು ಇದರಿಂದಾಗಿ ಓರ್ವ ಮಗುವನ್ನು ಬಾಗಲಕೋಟ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಲ್ಲಿನ ದತ್ತಾತ್ರೇಯ ದೇವಸ್ಥಾನದ ಬಳಿ ಮಗುವೊಂದನ್ನು ಕಚ್ಚಿದ್ದರಿಂದ ಆ ಬಾಲಕನ ಬೆರಳು ತುಂಡಾಗಿದ್ದು ಆ ಮಗುವನ್ನು ಬಾಗಲಕೋಟ ಆಸ್ಪತ್ರೆಗೆ ಸೇರಿಸಲಾಗಿದೆ.
ಅದೇ ರೀತಿ ಈ ಹುಚ್ಚು ನಾಯಿ ಝಂಡಾ ಕಟ್ಟೆಯ ಬಳಿ ಸುತ್ತಾಡುತ್ತಾ ನಾಲ್ಕೈದು ಮಕ್ಕಳನ್ನು ಕಚ್ಚಿ ಗಾಯಗೊಳಿಸಿದೆ ಎಂದು ಅಲ್ಲಿನ ನಿವಾಸಿಗಳಾದ ಜನಾರ್ಧನಕೆಂಧೂಳಿ, ಸುರೇಶ ರಾಯಬಾಗಿ, ಮಾರುತಿ ಪಾನ್ವಿ,ಮಹಿಬೂಬ ಟಂಕಸಾಲಿ ಗೋಪಾಲ ಸಿಂಗದ ಮತ್ತಿತರರು ದೂರಿದ್ದಾರೆ.
“ಹುಚ್ಚು ನಾಯಿ ಕಡಿತದಿಂದಾಗಿ ಮಕ್ಕಳಿಗೆ ಗಾಯವಾದ ಬಗ್ಗೆ ಬಂದ ದೂರಿನ ಹಿನ್ನಲೆಯಲ್ಲಿ ನಗರಸಭೆ ಸಿಬ್ಬಂದಿ ಅದನ್ನು ಹಿಡಿಯುವ ಪ್ರಯತ್ನ ನಡೆಸಿ ಅದರಲ್ಲಿ ಯಶಸ್ವಿಯಾಗಿದ್ದಾರೆ ಆ ಹುಚ್ಚು ನಾಯಿಯನ್ನು ಬಲೆಗೆ ಹಾಕಿ ಬೇರೆಡೆಗೆ ಸಾಗಿಸಲಾಗಿದೆ ಎಂದು ಆರೋಗ್ಯ ನಿರೀಕ್ಷಿಕ ಮಾನು ದೊಡ್ಡಮನಿ ಹೇಳಿದ್ದಾರೆ.”
“ನಾಯಿ ಕಚ್ಚಿಸಿಕೊಂಡು ಬಂದ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಬೆರಳು ತುಂಡಾದ ಮಗುವನ್ನು ಬಾಗಲಕೋಟ ಆಸ್ಪತ್ರೆಗೆ ಕಳಿಸಿಕೊಡಲಾಗಿದೆ ಎಂದು ಸರಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ ಚೇತನಾ ಶ್ಯಾವಿ ತಿಳಿಸಿದ್ದಾರೆ.”