soldier ನಿವೃತ್ತಗೊಂಡು ಹುಟ್ಟೂರಿಗೆ ಆಗಮಿಸಿದ ಯೋಧ ಮಂಜುನಾಥ ಬಾವೂರನಿಗೆ ಭರ್ಜರಿ ಸ್ವಾಗತ
ಇಳಕಲ್ : ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸಿ ದೇಶ ಸೇವೆ ಮಾಡಿ ಮರಳಿ ಹುಟ್ಟೂರಿಗೆ ಬಂದ ಮಂಜುನಾಥ ಬಾವೂರ
ಅವರನ್ನು ಫೆ.೦೧ ಶನಿವಾರದಂದು ನಗರಕ್ಕೆ ಆತ್ಮೀಯವಾಗಿ ಸ್ವಾಗತಿಸಿಕೊಂಡರು.
ಕಳೆದ ೨೧ ವರ್ಷಗಳ ಕಾಲ ಸೈನ್ಯದಲ್ಲಿ ತಮ್ಮ ಅಪೂರ್ವ ಸೇವೆಯನ್ನು ಸಲ್ಲಿಸಿ ಮರಳಿ ಬಂದ ಮಂಜುನಾಥ
ಅವರನ್ನು ಬಸವೇಶ್ವರ ಸರ್ಕಲ್ ದಿಂದ ತೆರದ ಜೀಪಿನಲ್ಲಿ ಭವ್ಯ ಮೆರವಣಿಗೆ ಮೂಲಕ ಎನ್.ಸಿ.ಸಿ. ವಿದ್ಯಾರ್ಥಿಗಳು,
ಅಭಿಮಾನಿಗಳು, ಸ್ನೇಹಿತರು ಮತ್ತು ಕುಟುಂಬಸ್ಥರು ಕರೆದುಕೊಂಡು ಬಂದರು.
ಕಂಠಿ ಸರ್ಕಲ್ದಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಯೋಧನಿಗೆ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು.
ಮೆರವಣಿಗೆಯ ಉದ್ದಕ್ಕೂ ನಗರದ ಗಣ್ಯ ವ್ಯಕ್ತಿಗಳು, ಮುಖಂಡರು ದೇಶಾಭಿಮಾನಿಗಳು
ಯೋಧನಿಗೆ ಹಾರವನ್ನು ಹಾಕುವ ಮೂಲಕ ನಗರಕ್ಕೆ ಸ್ವಾಗತಿಸಿಕೊಂಡರು.
ವರದಿ: ಭೀಮಣ್ಣ ಗಾಣಿಗೇರ (ಇಳಕಲ್ಲ)