HS Gowda ಕ್ರಿಯಾಶೀಲ ಲೇಖಕ ದತ್ತಿ ಪ್ರಶಸ್ತಿ ಪಡೆದ ಎಚ್.ಎಸ್.ಗೌಡರ
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಬಾಗಲಕೋಟೆ ಇವರು ಕೊಡ ಮಾಡುವ 2024 ರ ಕ್ರಿಯಾಶೀಲ
ಲೇಖಕ ದತ್ತಿ ಪ್ರಶಸ್ತಿಯನ್ನು ಇಳಕಲ್‌ದ ಸಾಹಿತಿ, ಶಿಕ್ಷಕ ಎಚ್,ಎಸ್,ಗೌಡರ ಅವರು ಸ್ವೀಕರಿಸಿದರು.
ಬಾಗಲಕೋಟ ತಾಲೂಕಿನ ಕಲಾದಗಿ ಪಟ್ಟಣದ ಹಣ್ಣು ಬೆಳೆಗಾರರ ಶಿಕ್ಷಣ ಸಂಸ್ಥೆ ಯಲ್ಲಿ ನಡೆದ
ಸಮಾರಂಭಲ್ಲಿ ಗಣ್ಯರು ಪ್ರಶಸ್ತಿಯನ್ನು ವಿತರಿಸಿದರು. ಪ್ರಶಸ್ತಿಯನ್ನು ಪಡೆದ ಎಚ್.ಎಸ್.ಗೌಡರ ಅವರಿಗೆ
ನಗರದ ಸಾಹಿತಿಗಳು, ಶಿಕ್ಷಕ ವೃಂದದವರು ಮತ್ತು ಸ್ನೇಹಿತರು, ಬಂಧು ಬಳಗದವರು ಅಭಿನಂದಿಸಿದ್ದಾರೆ.