Hiresinganagutti village ಹಿರೇಸಿಂಗನಗುತ್ತಿ ಗ್ರಾಮದ ಪಂಚಾಯತ ಅಧ್ಯಕ್ಷೆ ಮೇಲೆ ಅವಿಶ್ವಾಸ ಮಂಡನೆ
ಇಳಕಲ್ : ತಾಲೂಕಿನ ಹಿರೇಸಿಂಗನಗುತ್ತಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಶರಣಮ್ಮ ಮೂಲಿಮನಿ ಮೇಲೆ ಅವಿಶ್ವಾಸ ಮಂಡಿಸಿ
ಅದರಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಯಶಸ್ವಿಯಾದರು
ತಹಸೀಲ್ದಾರ ಸತೀಶ ಕೂಡಲಗಿ ನೇತೃತ್ವದಲ್ಲಿ ನಡೆದ ಅವಿಶ್ವಾಸ ನಿರ್ಣಯ ವಿಷಯದ ಚರ್ಚೆಯಲ್ಲಿ ೧೯
ಸದಸ್ಯರ ಬಲಯುಳ್ಳ ಗ್ರಾಮ ಪಂಚಾಯತಿಯಲ್ಲಿ ೧೩ ಸದಸ್ಯರು ಅಧ್ಯಕ್ಷರ ವಿರುದ್ಧ ಮತ ಚಲಾಯಿಸಿದರು.
ಅವರ ಪರವಾಗಿ ಕೇವಲ ೬ ಮತಗಳು ಮಾತ್ರ ಬಂದವು
ಕಾಂಗ್ರೆಸ್ ಪಕ್ಷದಿಂದ ಸಿಡಿದು ಎಸ್ ಆರ್ ಎನ್ ಇ ಫೌಂಡೇಶನ್ ಬೆಂಬಲದಿAದ
ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಶರಣಮ್ಮ ಮೂಲಿಮನಿ ಅಧಿಕಾರ ಕಳೆದುಕೊಂಡರು.