ILKAL POLICE ಇಳಕಲ್‌ದಲ್ಲಿ ಪೋಲಿಸರಿಂದ ಮಿಂಚಿನ ಕಾರ್ಯಾಚರಣೆ : ಬೈಕ್ ಸವಾರರು ದಿಕ್ಕಾಪಾಲು
ಇಳಕಲ್ : ಇಲ್ಲಿನ ಶಹರ್ ಪೋಲಿಸ್ ಠಾಣೆಯ ವತಿಯಿಂದ ಸೋಮವಾರದಂದು ಪೋಲಿಸರು ಕಂಠಿ ಸರ್ಕಲ್ ನಲ್ಲಿ ನಡೆಸಿದ
ಮಿಂಚಿನ ಕಾರ್ಯಾಚರಣೆಯಿಂದಾಗಿ ಬೈಕ್ ಸವಾರರು ದಿಕ್ಕಾಪಾಲಾಗಿ ಹೋಗಿದ್ದಾರೆ.
ಹೆಲ್ಮೆಟ್ ದಿಂದ ಹಿಡಿದು ಇತರ ಕಾಗದಪತ್ರಗಳು ಇಲ್ಲದೇ ಬೈಕ್ ಚಲಾಯಿಸುವ ಸವಾರರು ಎಲ್ಲಿ ನಾವು ಪೋಲಿಸರ
ಅತಿಥಿಗಳಾಗುತ್ತೇವೆ ಎಂಬ ಹೆದರಿಕೆಯಿಂದ ಅತ್ತಿತ್ತ ಬೈಕ್ ಚಲಾಯಿಸಿ ಇಲ್ಲವೇ ಜೋರಾಗಿ ಬೈಕ್ ಚಲಾಯಿಸಿ ಪೋಲಿಸರ
ಕೈಗೆ ಸಿಗದೇ ಹೋಗುತ್ತಿದ್ದ ಹಲವಾರು ಪ್ರಸಂಗಗಳು ಸೋಮವಾರದಂದು ಮಧ್ಯಾಹ್ನ ನಡೆದವು.
ಸಿಕ್ಕ ಬೈಕ್ ಸವಾರರ ಕಾಗದಪತ್ರಗಳನ್ನು ಪರಿಶೀಲಿಸಿ ಅದರ ಮೇಲೆ ದಂಡವನ್ನು ವಸೂಲಿ ಮಾಡಿದ ಪಿಎಸ್ ಐ ಷಹಜಹಾನ
ನಾಯಕ ಯಾರ ಮುಲಾಜಿಗೂ ಒಳಗಾಗದೇ ಕರ್ತವ್ಯ ನಿರ್ವಹಿಸಿದರು.
ಆದರೂ ಬೈಕ್ ಸವಾರರು ನಮ್ಮ ಪೈಕಿಯವರಿಗೆ ಆಸ್ಪತ್ರೆಗೆ ಹಾಕಲಾಗಿದೆ , ನಮ್ಮ ಪೈಕಿ ಒಬ್ಬರು ಮರಣ ಹೊಂದಿದ್ದಾರೆ ಹಾಗೆ
ಹೀಗೆ ಎಂದು ಹಲವಾರು ಸಬೂಬುಗಳನ್ನು ಹೇಳುತ್ತಿದ್ದರು.