water supply ಸರಿಯಾಗಿ ನೀರು ಪೂರೈಸುವಂತೆ ವೆಲ್ಫೇರ್ ಪಾರ್ಟಿ ಪೌರಾಯುಕ್ತರಿಗೆ ಮನವಿ
ಇಳಕಲ್ : ಹಲವಾರು ದಿನಗಳಿಂದ ೨೪*೭ ನೀರಿನ ಸಮಸ್ಯೆ ತೀವ್ರವಾಗಿದೆ, ನೀರಿನ ಅಭಾವದಿಂದ ಬಳಲುತ್ತಿರುವ ನಾಗರಿಕರು ನೀರಿಗಾಗಿ ಹಂಬಲಿಸುತ್ತಿದ್ದಾರೆ, ವಾರಗಳ ಕಾಲ ನೀರಿನ ಸರಬರಾಜು ಅಸಮರ್ಪಕವಾಗಿದ್ದು ನಗರಸಭೆಯಿಂದ ಯಾವುದೇ ಪರಿಣಾಮಕಾರಿ ಪರಿಹಾರ ಕಾಣದೆ ಜನರು ಕಷ್ಟಪಡುತ್ತಿದ್ದಾರೆ ಎಂದು ವೆಲ್ಫೇರ್ ಪಾರ್ಟಿಯ ಅಧ್ಯಕ್ಷ ಸಿರಾಜ ಹುಣಚಗಿ ಹೇಳಿದರು.ನಗರಸಭೆಯ ಕಾರ್ಯಾಲಯದಲ್ಲಿ ಬುಧವಾರದಂದು ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ ಅವರಿಗೆ ಮನವಿ ಪತ್ರವನ್ನು ನೀಡಿ ಮಾತನಾಡಿದ ಅವರು ನೀರಿನ ಸಮಸ್ಯೆ ನಿರಂತರವಾಗಿ ಮುಂದುವರೆದಿದ್ದರೂ ನಗರ ಸಭೆಯು ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳದಿದ್ದು ಚಿಂತನೀಯವಾಗಿದೆ, ನೀರಿನ ಸರಬರಾಜು ವ್ಯವಸ್ಥೆಯನ್ನು ತ್ವರಿತವಾಗಿ ಸುಧಾರಿಸಬೇಕು, ನೀರಿನ ಸರಬರಾಜು ವ್ಯವಸ್ಥೆಯನ್ನು ತ್ವರಿತವಾಗಿ ಸುಧಾರಿಸಬೇಕು , ಜನರ ಕಷ್ಟ ನಿವಾರಣೆಗೆ ಶೀಘ್ರದಲ್ಲಿ ಪರಿಹಾರ ಕಲ್ಪಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿಯ ಬಾಗಲಕೋಟ್ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ರಜಾಕ್ ಕಲಾಲ್, ಜಿಲ್ಲಾ ಉಪಾಧ್ಯಕ್ಷ ಆಫ್ಜಲ್ ಹುಮ್ನಾಬಾದ್, ರಫೀಕ್ ಬಲ್ಗನೂರ್, ಲಾಲ್ ಸಾಬ್ ಬಂಡಾರಿ, ಮುರ್ತುಜಾ ಸೈ ಮತ್ತಿತರರು ಇದ್ದರು.
ವರದಿ : ಭೀಮಣ್ಣ ಗಾಣಿಗೇರ