MLA Yatnal ಬಿಜೆಪಿಯಿಂದ 6 ವರ್ಷದ ವರೆಗೆ ಶಾಸಕ ಯತ್ನಾಳ ಉಚ್ಚಾಟನೆ
ಬಿಜೆಪಿಯಿಂದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಉಚ್ಚಾಟಿಸಿ ಬಿಜೆಪಿ ಶಿಸ್ತು ಸಮಿತಿ ಬುಧವಾರ ಆದೇಶಿಸಿದೆ.
ವಿಜಯಪುರ ನಗರ ಶಾಸಕ ಯತ್ನಾಳರನ್ನು ೬ ವರ್ಷಗಳ ವರೆಗೆ ಪಕ್ಷದಿಂದ ಉಚ್ಚಾಟಿಸಲಾಗಿದೆ. ಶಿಸ್ತು ಸಮಿತಿ ನೀಡಿದ್ದ ನೋಟಿಸ್ಥೆ
ಯಾವುದೇ ಉತ್ತರ ನೀಡದ ಕಾರಣ ಬಿಜೆಪಿ ಹೈಕಮಾಂಡ್ ಈ ನಿರ್ಧಾರವನ್ನು ಕೈಗೊಂಡಿದೆ.
ಇನ್ನು ಪದೇ ಪದೇ ಸ್ವಪಕ್ಷಿಯ ನಾಯಕರ ವಿರುದ್ಧವೇ ಶಾಸಕ ಯತ್ನಾಳ ಹೇಳಿಕೆ ನೀಡುತ್ತಿದ್ದ ಹಿನ್ನಲೆಯಲ್ಲಿ ಪಕ್ಷದಿಂದ ಉಚ್ಚಾಟಿಸಲಾಗಿದೆ.