Cholachagudda ಪಿಯು ಪರೀಕ್ಷೆ ೬೦೦ ಕ್ಕೆ ೫೬೯ ಅಂಕ ಪಡೆದ ರಂಜಿತಾ ನಿಂಗನಗೌಡ ಹಿರೇಗೌಡ್ರ
ಕೆ ಕೆ ತುಂಗಳ ಮೆಮೋರಿಯಲ್ ಟ್ರಸ್ಟ್ ಜಮಖಂಡಿ:: ತುಂಗಳ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ ಬಾಗಲಕೋಟೆ ಕಾಲೇಜಿನ ವಿಧ್ಯಾರ್ಥಿನಿ ರಂಜಿತಾ.ನಿAಗನಗೌಡ.ಹಿರೇಗೌಡ್ರ ದ್ವಿತೀಯ ಪಿ.ಯು. ಸಿ. ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ೬೦೦ ಅಂಕಗಳಿಗೆ ೫೬೯ ಅಂಕಗಳನ್ನು ಪಡೆದು ಶೇಕಡಾ %೯೪.೮೩ ಪರಸoಟೇಜ್ ಮಾಡಿ ಡಿಸ್ಟಿಂಗ್ಷನ್ ಆಗಿ ಪಾಸಾಗಿರುವ ಮೂಲತಃ ಬಾದಾಮಿ ತಾಲ್ಲೂಕಿನ ಚೊಳಚಗುಡ್ಡ ಗ್ರಾಮದ ವಿದ್ಯಾರ್ಥಿನಿ ರಂಜಿತಾ. ನಿಂಗನಗೌಡ. ಹಿರೇಗೌಡ್ರ.
ವಿದ್ಯಾರ್ಥಿನಿಯ ಸಾಧನೆಗೆ ಸಹಕರಿಸಿ ಮಾರ್ಗದರ್ಶನ ಮಾಡಿದ ಶಿಕ್ಷಣ ಸಂಸ್ಥೆಯವರಿಗೆ ಪೋಷಕರಾದ ನಿಂಗನಗೌಡ.ಬಸನಗೌಡ.
ಹಿರೇಗೌಡ್ರ ಹಾಗೂ ಶ್ರೀಮತಿ ರೂಪಾ.ನಿಂಗನಗೌಡ.ಹಿರೇಗೌಡ್ರ ಹಾಗೂ ಕುಟುಂಬವರ್ಗದವರು ಕೆ.ಕೆ. ತುಂಗಳ ಮೆಮೋರಿಯಲ್ ಟ್ರಸ್ಟನವರಿಗೆ ಹಾಗೂ ಬಾಗಲಕೋಟೆಯ ತುಂಗಳ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲರಿಗೆ ಹಾಗೂ ಸರ್ವ ಸಿಬ್ಬಂದಿಯವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.
ವರದಿ: ರಾಜೇಶ್. ಎಸ್. ದೇಸಾಯಿ ಬಾಗಲಕೋಟೆ