ಸತತವಾಗಿ ಏಳನೆಯ ವರ್ಷ ಪ್ರತಿಶತ ನೂರರಷ್ಟುಫಲಿತಾಂಶ ಪಡೆದ ಸಿದ್ದಾರ್ಥ ಪ್ರೌಢಶಾಲೆ
ಇಳಕಲ್ : ಇಲ್ಲಿನ ಡಾ ಬಾಬಾಸಾಹೇಬ ಅಂಬೇಡ್ಕರ್ ಸೇವಾ ಸಮಿತಿಯ ಸಿದ್ದಾರ್ಥ ಪ್ರೌಢಶಾಲೆಯ ಸತತವಾಗಿ ಏಳನೇಯ
ಬಾರಿ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದು ಜಿಲ್ಲೆಯಲ್ಲಿಯೇ ಹೊಸ ದಾಖಲೆಯನ್ನು ಬರೆದಿದೆ.
ಈ ವರ್ಷ ಪರೀಕ್ಷೆಗೆ ಕುಳಿತ ೫೯ ವಿದ್ಯಾರ್ಥಿಗಳು ಪಾಸಾಗಿದ್ದು ಆರು ವಿದ್ಯಾರ್ಥಿಗಳು ಡಿಸ್ಟಿಂಗಷನ್, ೧೧ ವಿದ್ಯಾರ್ಥಿಗಳು
ಪ್ರಥಮ ವರ್ಗ, ೩೬ ವಿದ್ಯಾರ್ಥಿಗಳು ದ್ವಿತೀಯ ವರ್ಗ ಮತ್ತು ಆರು ವಿದ್ಯಾರ್ಥಿಗಳು ತೃತೀಯ ವರ್ಗ ಪಡೆದುಕೊಂಡಿದ್ದಾರೆ.
೯೮.೪೦ ಅಂಕಗಳಿಸಿದ ರತ್ನಾ ಬಡಿಗೇರ ೯೦.೦೮ ಅಂಕಗಳಿಸಿದ ವಿಶ್ರೂತ ಬಡಿಗೇರ, ೯೫.೫೨ ಅಂಕ ಗಳಿಸಿದ ಅನೂಪ
ಪತ್ತಾರ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ನಿತ್ಯದ ತರಗತಿಯ ಜೊತೆಗೆ ಪರೀಕ್ಷಾ ಸಮಯದಲ್ಲಿ ರಾತ್ರಿ
ಸಮಯವೂ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುವ ಶಿಕ್ಷಕರನ್ನು ಆಡಳಿತ ಮಂಡಳಿಯ ಸದಸ್ಯರು ಅಭಿನಂದಿಸಿದ್ದಾರೆ.