Ilakal Municipality ಇಳಕಲ್ ನಗರಸಭೆಯ ನಾಲ್ಕು ತ್ಯಾಜ್ಯ ವಿಲೇವಾರಿವಾಹನಗಳನ್ನು ಉದ್ಘಾಟಿಸಿದ ಶಾಸಕ ಕಾಶಪ್ಪನವರ
ಬಾಗಲಕೋಟ ಜಿಲ್ಲೆಯ ಇಳಕಲ್ ನಗರಸಭೆಯ ಸನ್ ೨೦೨೩ – ೨೪ ನೇ ಸಾಲಿನ ೧೫ ನೇ ಹಣಕಾಸು ಯೋಜನೆ
ಅಡಿಯಲ್ಲಿ ೮೦.೦೭ ಲಕ್ಷ ರೂಗಳಲ್ಲಿ ಖರೀದಿಸಿದ ನಾಲ್ಕು ತ್ಯಾಜ್ಯ ವಿಲೇವಾರಿ ವಾಹನಗಳಿಗೆ ಪೂಜೆ ಸಲ್ಲಿಸುವ ಮೂಲಕ ವೀರಶೈವ ಲಿಂಗಾತ ಅಭಿವೃಧ್ದಿ
ನಿಗಮದ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ಮೇ.೦೬ ಮಂಗಳವಾರದAದು ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿದರು.
ಜೆಟ್ಟಿಂಗ್ ಮತ್ತ ಸಕ್ಕಿಂಗ್ ಮಷಿನ್ , ಮ್ಯಾನ ಹೋಲ್ ಡಿ ಸಿಲ್ಟಿಂಗ್ ಮಷೀನ್, ಟ್ರಾö್ಯಕ್ಟರ್ ಮೌಂಟಡ ಡೋಜನ್,
ಟ್ರಾö್ಯಕ್ಟರ್ ಮೌಂಟಡ್ ನಾಲ್ ಕ್ಲೀನಿಂಗ್ ಮಷೀನ್ಗಳನ್ನು ಉದ್ಘಾಟಿಸಿದರು.
ಈ ಸಮಯದಲ್ಲಿ ನಗರಸಭೆ ಅಧ್ಯಕ್ಷೆ ಸುಧಾರಣಿ ಸಂಗಮ್, ಉಪಾಧ್ಯಕ್ಷೆ ಕಾಳಮ್ಮ ಜಕ್ಕಾ,
ಸದಸ್ಯರಾದ ಸುರೇಶ ಜಂಗ್ಲಿ, ಅಮೃತ ಬಿಜ್ಜಳ, ಮೌಲೇಶ ಬಂಡಿವಡ್ಡರ, ರೇಷ್ಮಾ ಮಾರನಸಬರಿ
ತಿಮ್ಮಾಪೂರ, ಸೋನಾರ್ ಹಾಗೂ ನಾಮನಿರ್ದೇಶಿತ ಸದಸ್ಯ ಮಲ್ಲು ಮಡಿವಾಳರ, ಯಲ್ಲಪ್ಪ ರಾಜಾಪೂರ,
ರಾಧೆಶ್ಯಾಮ ದರಕ, ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ ಮತ್ತು ಸಿಬ್ಬಂದಿ ವರ್ಗದವರು ಇದ್ದರು.
ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ)