Our School Our Responsibility programme ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೇದಾರ
ಇಳಕಲ್ : ನಮ್ಮ ಶಾಲೆ ನಮ್ಮ ಜವಾಬ್ದಾರಿ ಎಂಬ ತಾಲೂಕ ಮಟ್ಟದ ಕಾರ್ಯಕ್ರಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಹನುಮನಾಳ ಎಸ್ ಟಿ ಶಾಲೆಯಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೆದಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ ಮತ್ತು ಗುಣಮಟ್ಟದ
ಶಿಕ್ಷಣ ಸಿಗುವ ಕುರಿತು ಭರವಸೆ ನೀಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಸದಾಶಿವ ಗುಡಗುಂಟಿ ಮಾತನಾಡಿ ಮಕ್ಕಳ
ಸರ್ವತೋಮುಖ ಬೆಳವಣಿಗಾಗಿ ಕಲಿಕಾ ಸ್ನೇಹಿ ವಾತಾವರಣ ಸರ್ಕಾರಿ ಶಾಲೆಯಲ್ಲಿ ಇರುವುದು ಖಚಿತಪಡಿಸದರು.
ಈ ಕಾರ್ಯಕ್ರಮದಲ್ಲಿ ಮೊದಲನೇ ಅಧಿವೇಶನದಲ್ಲಿ ನಮ್ಮ ಶಾಲೆ ನಮ್ಮ ಜವಾಬ್ದಾರಿ ಉದ್ದೇಶ ಮತ್ತು ಇಲಾಖೆಯ
ಸದಾಶಯ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದರು. ಎರಡನೆಯ ಅವಧಿಯಲ್ಲಿ ಮಕ್ಕಳ ನಿರಂತರ ಕಲಿಕೆಗಾಗಿ
ಶೈಕ್ಷಣಿಕ ಸೌಲಭ್ಯಮತ್ತು ಪ್ರೋತ್ಸಾಹಕಗಳು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜಿ ವೈ ಆಲೂರ್ ಇವರು ತಿಳಿಸಿದರು. ಮೂರನೇ
ಅವಧಿಯಲ್ಲಿ ಮಕ್ಕಳ ನಿರಂತರ ಕಲಿಕೆಗಾಗಿ ಪೌಷ್ಟಿಕ ಬೆಂಬಲ ವಿವಿಧ ಪ್ರಯೋಜನಗಳು, ಹಾಗೂ ಅವುಗಳ ಅನುಷ್ಠಾನ
ಮತ್ತು ಪ್ರಾಮುಖ್ಯತೆ ದೀಪಾ ಗೋಟರು ಮೂರನೇ ಅವಧಿ ನಡೆಸಿಕೊಟ್ಟರು. ಭಾಗಿದಾರರಿಗೆ ಸರ್ಕಾರಿ ಶಾಲೆಗಳ ಮೂಲ
ಸೌಕರ್ಯ ಮತ್ತು ಸೌಲಭ್ಯಗಳ ಕುರಿತು ಬರ್ಡ್ಸ್ ಸಂಸ್ಥೆಯ ಕಾರ್ಯಕರ್ತರು ನಡೆಸಿದರು.ಐದನೆಯ ಅವಧಿ ಮಾಹಿತಿಯನ್ನು
ಸಿಆರ್‌ಪಿಗಳಾದ ರಾಘವೇಂದ್ರ ಕೆಂದೂಳಿಯವರು ಮಾಹಿತಿ ಪಡೆದರು.
ಕುಬೇರ್ ಹೊಂಗಲ್ ಸ್ವಾಗತಿಸಿದರು.ಮಹೇಂದ್ರಕುಮಾರ್ ಬೆನ್ನೂರು ನಿರೂಪಿಸಿದರು. ಮುಖ್ಯ ಗುರುಗಳು ಎಸ್ ಎಚ್ ಹವಾಲ್ದಾರ
ವಂದಿಸಿದರು. ಕಾರ್ಯಕ್ರಮದಲ್ಲಿ ಹನುಮನಾಳ ಎಸ್ ಟಿ ಗ್ರಾಮದ ಎಲ್ಲಾ ಗುರು ಹಿರಿಯರು ಭಾಗವಹಿಸಿದ್ದರು.
ಮತ್ತು ಇಳಕಲ್ಲ ಮಧ್ಯದ ಎಲ್ಲಾ ಶಾಲೆಯ ಮುಖ್ಯ ಗುರುಗಳು ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಸದಸ್ಯರು ಅಡುಗೆ
ಸಿಬ್ಬಂದಿಯವರು ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದ್ದರು.