Jamkhandi The groom tied the knot and said goodbye to his life! ತಾಳಿ ಕಟ್ಟಿ ಬದುಕಿಗೆ ವಿರಾಮ ಹೇಳಿದ ವರ ! ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ವಧುವಿನ ಕೊರಳಿಗೆ ತಾಳಿ ಕಟ್ಟಿದ ಕೆಲವೇ ನಿಮಿಷಗಳಲ್ಲಿ ವರ ಹೃದಯಾಘಾತದಿಂದ ಅಸುನೀಗಿದ ಘಟನೆ ಮೇ ೧೭ ಶನಿವಾರದಂದು ನಡೆದಿದೆ.
ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದ ನಿವಾಸಿ ಪ್ರವೀಣ ಕುರಣಿ (೨೫) ಅವರ ಮದುವೆ ಸ್ಥಳೀಯ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜನೆಗೊಂಡಿತ್ತು.
ಸಮಯಕ್ಕೆ ಸರಿಯಾಗಿ ವಧುವಿಗೆ ತಾಳಿ ಕಟ್ಟಿ ಅಕ್ಷತಾ ಕಾರ್ಯ ನಡೆದು ೧೫ ನಿಮಿಷಗಳ ನಂತರ ವರ ಪ್ರವೀಣಗೆ ಹೃದಯಾಘಾತವಾಗಿ ಮದುವೆ ಮಂಟಪದಲ್ಲಿಯೇ ಕುಸಿದು ಸಾವನ್ನಪ್ಪಿದರು.
ಮದುವೆಗೆ ಆಗಮಿಸಿ ಸಂಭ್ರಮ ಪಡುತ್ತಿದ್ದ ಬಂಧು, ಬಾಂಧವರು ಈ ಘಟನೆಯಿಂದ ಚಕಿತಗೊಂಡು ನೋಡ ನೋಡುತ್ತಿದ್ದಂತೆ ಪ್ರವೀಣ ಕುರಣಿ ಸಾವನ್ನಪ್ಪಿದ್ದರು.
ಮದುವೆ ಕುಟುಂಬದವರ ಅಕ್ರಂದನ ಮುಗಿಲು ಮುಟ್ಟಿದ್ದು ಜನ ಮಮ್ಮಲ ಮರಗಿದರು. ನವ ಜೀವನ ಆರಂಭವಾಗುವ ಮೊದಲೇ ಪ್ರವೀಣ ಕುರಣಿ ಬದುಕಿಗೆ ವಿದಾಯ ಹೇಳಿದ್ದು ವಿಧಿಯಾಟವೇಸರಿ.