financial help ಅರ್ಥಿಕ ಸಹಾಯ ಹಸ್ತಕ್ಕೆ ಕಾದಿರುವ ಪ್ರತಿಭಾನ್ವಿತ ಬಡ ವಿದ್ಯಾರ್ಥಿನಿ ಮಹಾಲಿಂಗಪುರ ಸಮೀಪ ಮದಭಾವಿ ಗ್ರಾಮದ ಕೀರ್ತಿ ತಿರಕನ್ನವರ
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಸಮೀಪದ ಮಾಡಭಾವಿ ಗ್ರಾಮದ ಕುಮಾರಿ ಕೀರ್ತಿ ತಿರಕನ್ನವರ ಎನ್ನುವ ವಿದ್ಯಾರ್ಥಿನಿ ತಂದೆಯನ್ನು ಕಳೆದುಕೊಂಡ ತಾಯಿ ಮತ್ತು ಅಣ್ಣನ ಆಶ್ರಯದಲ್ಲಿ ಜೋಪಡಿಯಲ್ಲಿ ವಾಸಿಸುವ ಬಡ ಪ್ರತಿಭಾವಂತ ವಿದ್ಯಾರ್ಥಿನಿ ಅಂದರೆ ತಪ್ಪಾಗಲಿಕ್ಕಿಲ್ಲ. ಕೀರ್ತಿ ತಿರಕನ್ನವರ ಹುಟ್ಟೂರಾದ ಮದಭಾವಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್. ಎಸ್. ಎಲ್.ಸಿ.ಪರೀಕ್ಷೆಯಲ್ಲಿ ಶೇ ೯೬% ಅಂಕ ಪಡೆದು,, ನಂತರ ಮಹಾಲಿಂಗಪುರದ ಕೆ. ಎಲ್. ಇ. ಪದವಿಪೂರ್ವ ಕಾಲೇಜಿನಲ್ಲಿ ಶೇ ೯೪% ಅಂಕಗಳೊAದಿಗೆ ಕಾಲೇಜಿಗೆ ದ್ವಿತೀಯ ರ್ಯಾಂಕ್ ಪಡೆದಿದ್ದಾಳೆ. ತದನಂತರ ಬಿ. ಎ. ಪದವಿ ಮುಗಿಸಿ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಪಿ. ಎಸ್.ಐ. ಆಗಬೇಕು ಎಂಬ ಗುರಿಯೊಂದಿಗೆ ಕನಸು ಹೊತ್ತು ನಿಂತಿದ್ದಾಳೆ.
ಇಷ್ಟೆಲ್ಲಾ ಕನಸು ಇವೆ ನಿಜ ಆದರೆ ವಾಸ್ತವ ಬದುಕಿನಲ್ಲಿ ಈಗ ಕೀರ್ತಿ ಪಿ. ಯು.ಸಿ. ಪರೀಕ್ಷೆ ಫಲಿತಾಂಶ ಹೊರಬಿದ್ದು ಬರೋಬ್ಬರಿ ೪೫ ದಿನಗಳಾದರೂ ಇಲ್ಲಿಯವರೆ ಮುಂದಿನ ಶಿಕ್ಷಣ ಕಲಿಯಲು ಭರವಸೆಯೇ ಇಲ್ಲದಂತಾಗಿದೆ. ಕನಸುಗಳ ನನಸಾಗಿಸುವ ಅರ್ಥಿಕ ವ್ಯವಸ್ಥೆ ಇಲ್ಲದೇ ಒಬ್ಬ ಪ್ರತಿಭಾನ್ವಿತ ಉತ್ಸಾಹಿ ವಿದ್ಯಾರ್ಥಿನಿ ಕೀರ್ತಿ ತಿರಕನ್ನವರ ವಿದ್ಯಾರ್ಥಿನಿಗೆ ದಾರಿ ತೋಚದೆ ಮನೆಯವರಿಗೆ ಹೊರೆಯಾಗಬಾರದು ಎಂದು ಸುಮ್ಮನೆ ಮನೆಯಲ್ಲಿ ಕೈ ಚಲ್ಲಿ ಕುಳಿತಿದ್ದಾಳೆ.ಒಬ್ಬ ಪ್ರತಿಭಾನ್ವಿತ ವಿದ್ಯಾರ್ಥಿನಿ ಕೀರ್ತಿ ತಿರಕಣ್ಣವರ ಗೆ ಬೇಕಿರುವುದು ಆರ್ಥಿಕ ಸಹಾಯ ಹಸ್ತ ಮುಂದಿನ ಭವಿಷ್ಯ ಕಟ್ಟಿಕೊಳ್ಳಲು ರಾಜಕಾರಣಿಗಳು ವಿವಿಧ ಸಂಘ ಸಂಸ್ಥೆಗಳು, ಶಿಕ್ಶಣ ಪ್ರೇಮಿಗಳು, ಕೊಡುಗೈ ದಾನಿಗಳು ಯಾರೇ ಆಗಿರಲಿ ಬಡ ವಿದ್ಯಾರ್ಥಿಯ ಶಿಕ್ಷಣಕ್ಕೆ ಸಹಾಯ ಮಾಡಬೇಕಿದೆ ಎನ್ನುವುದು ನಮ್ಮ ವಾಹಿನಿಯ ಕಳಕಳಿಯ ಮನವಿಯಾಗಿದೆ……
ಕೀರ್ತಿ ತಿರಕನ್ನವರ ಬಡ ವಿದ್ಯಾರ್ಥಿಗೆ ಸಹಾಯ ಮಾಡಲು ಸಂಪರ್ಕಿಸಲು ದೂರವಾಣಿ ಸಂಖ್ಯೆ Ph:- ೯೭೪೧೯೮೯೪೨೬. ಹಾಗೂ ಬ್ಯಾಂಕ್ ಖಾತೆಯ ವಿವರ ಕೀರ್ತಿ ತಿರಕನ್ನವರ ಏ.ಗಿ.ಉ.ಃ. ಬ್ಯಾಂಕ್ ಖಾತೆ ಸಂಖ್ಯೆ ಂ/ಅ ಓo:- ೮೯೧೫೬೩೬೧೯೨೩
IಈSಅ ಕೋಡ್ ನಂಬರ್ ಏಗಿಉಃ೦ ೦೦೧೫೧೫ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮದಭಾವಿ ಶಾಖೆ ಇದಕ್ಕೆ ಹಣ ಸಂದಾಯ ಮಾಡಬಹುದು……
ಪ್ರತಿಭಾನ್ವಿತ ಬಡ ಹುಡುಗಿ ಕೀರ್ತಿ ಗೆ ಶಿಕ್ಷಣಕ್ಕೆ ಸಹಾಯಕ್ಕೆ ರಾಜ್ಯದ ಜನತೆ ಮುಂದಾಗಿ.. ಕೀರ್ತಿಗೆ ಮಾಡಿದರೆ ನಮ್ಮ ನಾಡಿಗೆ ಕೀರ್ತಿ ತರುವುದರಲ್ಲಿ ಎರಡು ಮಾತಿಲ್ಲ ಎನ್ನಬಹುದು.
ವರದಿ:- ರಾಜೇಶ್.ಎಸ್.ದೇಸಾಯಿ ಬಾಗಲಕೋಟೆ