Rural Police create awareness ಗ್ರಾಮಗಳಲ್ಲಿ ಬಾಲ್ಯ ವಿವಾಹ ಕಾಯ್ದೆ, ಸೈಬರ್ ಕ್ರೈಂಗಳಬಗ್ಗೆ ಜಾಗೃತಿ ಮೂಡಿಸಿದ ಇಳಕಲ್ಲ ಗ್ರಾಮೀಣ ಪೋಲಿಸರು
ಇಳಕಲ್ಲ : ಬಾಗಲಕೋಟ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಆದೇಶದ ಮೇರೆಗೆ ಇಳಕಲ್ ತಾಲೂಕಿನ ಚಿಕ್ಕ
ಆದಾಪೂರ, ಹೇರೂರು, ತುಂಬ ಮತ್ತು ಹಿರೇಶಿವನಗುತ್ತಿ ಗ್ರಾಮಗಳಲ್ಲಿ ನಗರ ಗ್ರಾಮೀಣ ಪೋಲಿಸ್ ಠಾಣೆಯ ಪೋಲಿಸರು ಸ್ಪೆಷಲ್
ಚೀತಾ ೧೧೨ ಮೂಲಕ ಗ್ರಾಮದ ಸಾರ್ವಜನಿಕರಿಗೆ ಬಾಲ್ಯ ವಿವಾಹ ಕಾಯ್ದೆ, ಸೈಬರ್ ಕ್ರೆöÊಂ, ಪೋಕ್ಸ್ ಕಾಯ್ದೆ, ವಾಹನ ಚಾಲನೆ,
ತ್ರಿಬಲ್ ರೈಡಿಂಗ್, ಹೆಲ್ಮೆಟ್ ಮುಂತಾದ ವಿಷಯಗಳ ಬಗ್ಗೆ ಕ್ರೆöÊಂ ಪಿಎಸ್‌ಐ ಸಿಮಾನಿ ಸಾರ್ವಜನಿಕರಿಗೆ ಜಾಗೃತಿಯನ್ನು ಮೂಡಿಸಿ
ಮಾತನಾಡಿದ ಅವರು ಸಣ್ಣ ಮಕ್ಕಳ ಕೈಯಲ್ಲಿ ಬೈಕ್‌ಗಳು ಮತ್ತು ಕಾರ್‌ಗಳನ್ನು ನೀಡಬಾರದು, ಕುಡಿದ ಮತ್ತಿನಲ್ಲಿ ವಾಹನಗಳನ್ನು
ಚಲಾಯಿಸಬಾರದು, ಬೈಕ್‌ಗಳನ್ನು ಚಲಾಯಿಸುವ ವೇಳೆ ಕಡ್ಡಾಯವಾಗಿ ಹೆಲ್ಮೆಟ್ ಮತ್ತು ಕಾರ್‌ಗಳನ್ನು ಚಲಾಯಿಸುವ ವೇಳೆ ಸೀಟ್
ಬೆಲ್ಟ್ಧರಿಸಬೇಕು ವಾಹನಗಳ ದಾಖಲಾತಿಗಳನ್ನು ಕಡ್ಡಾಯವಾಗಿ ಇಡಬೇಕು ಎಂದು ಹೇಳಿದರು.
ಈ ಸಮಯದಲ್ಲಿ ಪೋಲಿಸ್ ಸಿಬ್ಬಂದಿಗಳಾದ ಎಎಸ್‌ಐ ಮಾಸಗಿ, ಎಸ್.ಎಸ್.ಮುಲ್ಲಾ, ಆರ್.ಡಿ.ನಾವಿ ಮತ್ತು ಸ್ಪೆಷಲ್ ಚಿತಾ ಡಿ.ಆರ್. ಸಿಬ್ಬಂದಿಗಳು ಇದ್ದರು.