environmental education to students ವಿದ್ಯಾರ್ಥಿಗಳಿಗೆ ಪರಿಸರ ಪಾಠ ಮಾಡಿದ ಶಾಸಕ ಕಾಶಪ್ಪನವರ
ಇಳಕಲ್ಲ : ಮಾನವ ಜೀವ ಬದುಕಿದೆ ಎಂದರೆ ಅದಕ್ಕೆ ಪರಿಸರ ಕಾರಣ. ಮನುಷ್ಯನ ಆಸೆಗೆ ಪರಿಸರ ಬಲಿಯಾಗುತ್ತಿದೆ ಎಂದು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಕಂದಗಲ್ಲ ಗ್ರಾಮದಲ್ಲಿ ತಾಲೂಕ ಆಡಳಿತ, ತಾಲೂಕ ಪಂಚಾಯತ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ ಅವರು ಪರಿಸರ ಇಲ್ಲದೆ ಮನುಷ್ಯ ಬದುಕಿರಲಾರ. ಭೂಮಲಿನ, ವಾಯುಮಲಿನ, ಮಣ್ಣು ಮಲಿನವಾಗುತ್ತಿದೆ. ಆಹಾರ ಪದಾರ್ಥಗಳು ವಿಷವಾಗಿ ಬದಲಾಗುತ್ತಿವೆ. ಮನುಷ್ಯನ ಆಸೆಗೆ ಸುಂದರವಾಗಿರುವ ಅರಣ್ಯ ಪ್ರದೇಶಗಳು, ಪರಿಸರ ನಾಶವಾಗುತ್ತಿದೆ. ಇನ್ನೆಲ್ಲಿ ನಾವು ಪರಿಸರವನ್ನು ಸಂರಕ್ಷಣೆ ಮಾಡುವುದು. ಮಾನವನಿಗೆ ಪ್ರಜ್ಞೆ ಬಂದಾಗ ಮಾತ್ರ ಪರಿಸರ ಮತ್ತು ಪ್ರಾಣಿ ಪಕ್ಷಿಗಳು ಉಳಿಯುತ್ತವೆ ಇಲ್ಲದಿದ್ದರೆ ಅಳಿದು ಹೋಗುತ್ತದೆ.
ವಿಶ್ವಪರಿಸರ ದಿನಾಚರಣೆ ಒಂದೇ ದಿನಕ್ಕೆ ಸೀಮಿತವಾಗದೆ ಇಡೀ ವರ್ಷ ಪ್ರತಿಯೊಬ್ಬರು ತಮ್ಮ ಹುಟ್ಟು ಹಬ್ಬಗಳಿಗೆ ಒಂದೊAದು ಗಿಡಗಳನ್ನು ನೆಟ್ಟರೆ ಸಾಕು ಪರಿಸರವನ್ನು ಉಳಿಸಬಹುದು. ನೀರು ಮತ್ತು ಭೂಮಿಯನ್ನು ನಾವು ರಕ್ಷಣೆ ಮಾಡಬೇಕು ಆಗ ಮಾತ್ರ ಬದುಕು ಸಾರ್ಥಕ ಎನಿಸುತ್ತದೆ ಎಂದರು.
ಪ್ರಗತಿಪರ ರೈತ ಚನ್ನಪ್ಪಗೌಡ ನಾಡಗೌಡ ಮಾತನಾಡಿ ಶಾಲಾ-ಕಾಲೇಜುಗಳಲ್ಲಿ ಗಿಡ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪರಿಸರದ ಜಾಗೃತಿಯನ್ನು ವಿದ್ಯಾರ್ಥಿಗಳಿಗೆ ಬಿತ್ತಲಾಗುತ್ತಿದೆ. ಭವಿಷ್ಯದಲ್ಲಿ ಮುಂದಿನ ಪೀಳಿಗೆಯ ಬದುಕು ಕಷ್ಟಕರವಾಗಿದೆ. ಈಗಾಗಲೇ ನಾವು ವಿಷವುಳ್ಳ ಆಹಾರ ಪದಾರ್ಥಗಳು ಮತ್ತು ಮಲಿನವಾಗಿರುವ ಗಾಳಿಯನ್ನು ಸೇವಿಸುತ್ತಿದ್ದೇವೆ. ಕೋಡ್ ಸಂದರ್ಭದಲ್ಲಿ ಆಕ್ಸಿಜನ್ ಇಲ್ಲದ ಎಷ್ಟೋ ಜನರು ಸಾವನ್ನಪ್ಪಿದ್ದಾರೆ.
ಹಾಗಾಗಿ ಮುಂದಿನ ಪೀಳಿಗೆಗೆ ನಾವು ಶುದ್ಧವಾದ ಗಾಳಿ, ಆಹಾರ, ಪ್ರಕೃತಿ, ಶುದ್ಧ ಕುಡಿಯುವ ನೀರನ್ನು ನಾವು ಕೊಡುಗೆಯಾಗಿ ನೀಡಬೇಕಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಬಸವರಾಜ ಅಳ್ಳೋಳ್ಳಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಮುರಾರ್ಜಿ ದೇಸಾಯಿ ವಸತಿ ಶಾಲೆಯ ಮುಖ್ಯಗುರು ಹಾಗೂ ಶಿಕ್ಷಕರು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ)