Bagalkot Deputy Commissioner ಬಾಗಲಕೋಟೆ ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ವರ್ಗಾವಣೆ ಜಾಗಕ್ಕೆ ನೂತನ ಜಿಲ್ಲಾಧಿಕಾರಿಯಾಗಿ ಸಂಗಪ್ಪ
ಬಾಗಲಕೋಟೆ ಜಿಲ್ಲಾಧಿಕಾರಿ ಕೆ. ಎಂ. ಜಾನಕಿ ಅವರು ವರ್ಗಾವಣೆಯಾಗಿದ್ದು ಬಾಗಲಕೋಟೆ ನೂತನ
ಜಿಲ್ಲಾಧಿಕಾರಿಯಾಗಿ ಮಾನ್ಯ ಸಂಗಪ್ಪ ಅವರು ಜಿಲ್ಲಾಧಿಕಾರಿಯಾಗಿ ಕರ್ತವ್ಯಕ್ಕೆ ಹಾಜರಾಗುವರು.
ಇಲ್ಲಿಯವರೆಗೆ ಬಾಗಲಕೋಟೆ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಕೆ. ಎಂ.ಜಾನಕಿ ಅವರು ಕೃತಜ್ಞತಾ
ಪಾತ್ರದ ಮೂಲಕ “ಕಳೆದ ಎರಡು ವರ್ಷಗಳಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ
ಬಾಗಲಕೋಟೆ ಜಿಲ್ಲೆಯ ಜನತೆ ತೋರಿಸಿದ ಪ್ರೀತಿ,ವಿಶ್ವಾಸಕ್ಕೆ ನಾನು ಕೃತಜ್ಞನಾಗಿದ್ದೇನೆ. ಬಾಗಲಕೋಟೆ
ಜಿಲ್ಲೆಗೆ ನನ್ನ ಹೃದಯದಲ್ಲಿ ಶಾಶ್ವತ ಸ್ಥಾನವಿದೆ. ಬಾಗಲಕೋಟೆ ಜಿಲ್ಲೆಯು ಎಲ್ಲ ರಂಗಗಳಲ್ಲಿಯೂ
ಮತ್ತಷ್ಟು ಪ್ರಗತಿ ಸಾಧಿಸುವಂತಾಗಲಿ ಎಂದು ಆಶಿಸುತ್ತೇನೆ ಎಂದು ಜಿಲ್ಲೆಯ ಜನತೆಗೆ ತಿಳಿಸಿದ್ದಾರೆ”.
ವರದಿ:- ರಾಜೇಶ್. ಎಸ್.ದೇಸಾಯಿ ಬಾಗಲಕೋಟೆ