
Dead body of donkey ಗುಡೂರ ವಡಗೇರಿ ಮಾಗ೯ ಮಧ್ಯ ರಸ್ತೆಯಲ್ಲಿ ಕತ್ತೆ ಕಿರುಬ ಶವ ಪತ್ತೆ
ಬಾಗಲಕೋಟೆ : ಜಿಲ್ಲೆಯ ಇಳಕಲ್ ತಾಲೂಕಿನ ಗುಡೂರು ಮತ್ತು ವಡಗೇರಿ ಮಾಗ೯ ಮಧ್ಯದ ರಸ್ತೆಯಲ್ಲಿ
ಜೂನ್ ೨೬ ರಾತ್ರಿ ೧೦ ಗಂಟೆಯ ಸಂದರ್ಭ ಅಳಿವಿನ ಅಂಚಿನಲ್ಲಿರುವ ಪ್ರಾಣಿ ಕತ್ತೆ ಕಿರುಬಕ್ಕೆ ಅಪರಿಚಿತ
ವಾಹನವೊಂದು ಡಿಕ್ಕಿ ಹೊಡೆದುಕೊಂಡು ಹೋಗಿದ್ದರಿಂದ ಕತ್ತೆ ಕಿರುಬ ಸ್ಥಳದಲ್ಲಿಯೇ ಮೃತಪಟ್ಟಿದೆ ಎಂದು
ಸ್ಥಳೀಯ ನಿವಾಸಿಗಳು ಜೂನ್ ೨೭ ಮುಂಜಾನೆ ೭ ಗಂಟೆಗೆ ಮಾಹಿತಿಯನ್ನು ನೀಡಿದ್ದಾರೆ.
ಗುಡೂರ ವಡಗೇರಿ ಮಾಗ೯ ಅರಣ್ಯ ಪ್ರದೇಶವಾಗಿರುವದ್ದರಿಂದ ಕಾಡು ಪ್ರಾಣಿಗಳು ಅಲ್ಲಿ ವಾಸ ಮಾಡುತ್ತಿದ್ದು
ರಸ್ತೆ ದಾಟುವಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ರಾತ್ರಿ ಸಮಯದಲ್ಲಿ ವಾಹನ ಚಾಲಕರು
ನಿಧಾನವಾಗಿ ಸಂಚರಿಸಬೇಕು ಎಂದು ಪ್ರಾಣಿ ಪ್ರೇಮಿಗಳು ಮನವಿ ಮಾಡಿದ್ದಾರೆ.
ವರದಿ: ಭೀಮಣ್ಣ ಗಾಣಿಗೇರ ( ಇಳಕಲ್ಲ)





