Chalukya Nadu Badami ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ದಾವಣಗೆರೆ ನಡೆಸುತ್ತಿರುವ ಕನ್ನಡ ಕುವರಿ ಜಿಲ್ಲಾ ಪ್ರಶಸ್ತಿಗೆ ಚಾಲುಕ್ಯರ ನಾಡು ಬಾದಾಮಿಯ ರಕ್ಷಿತಾ ಆಯ್ಕೆ.
ರಕ್ಷಿತಾ ಪರಶುರಾಮ ಕಲ್ಯಾಣಕರ ನನ್ನ ತಾಯಿ ರೇಖಾ ಕಲ್ಯಾಣಕರ್ ನಾನು ಬಾಗಲಕೋಟೆ ಜಿಲ್ಲೆಯವರ್ ಬಾದಾಮಿ ತಾಲುಕಿನ ಬಾದಾಮಿಯಲ್ಲಿ ಶ್ರೀ ವೀರಶೈವ ಪ್ರಗತಿಶೀಲ ಸಂಘದ ಶ್ರೀ ಬಸವೇಶ್ವರ ಪ್ರೌಢ ಶಾಲೆಯಲ್ಲಿ ನಾನು ಎಸ್.ಎಸ್. ಎಲ್. ಸಿ. ಪರೀಕ್ಷೆ ಬರೆದಿದ್ದೇನೆ.
೨೦೨೪-೨೫ ನೇ ಸಾಲಿನ ಎಸ್. ಎಸ್. ಎಲ್ ಸಿ. ಪರೀಕ್ಷೆಯಲ್ಲಿ ಒಟ್ಟು ಅಂಕ ೬೨೫ ಕ್ಕೆ ೫೩೭ ಅಂಕ ಪಡೆದಿದ್ದೇನೆ. ಹಾಗೂ ಕನ್ನಡ ವಿಷಯದಲ್ಲಿ ೧೨೫ ಕ್ಕೆ ೧೨೧ ಅಂಕಗಳನ್ನು ಪಡೆದಿದ್ದೇನೆ. ಈ ಕನ್ನಡದ ವಿಷಯದಲ್ಲಿ ಹೆಚ್ಚಿನ ಅಂಕಗಳ ಸಾಧನೆಗೆ “ಕನ್ನಡದ ಕುವರಿ” ಎಂದು “ಜಿಲ್ಲಾ ಪ್ರಶಸ್ತಿಗೆ” ಆಯ್ಕೆ ಮಾಡಿದ್ದಾರೆ.
ನನಗೆ ೨೦೨೫ ರ ಜುಲೈ ೨೦ ರಂದು ದಾವಣಗೆರೆ ನಗರದ ಶ್ಯಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಆಯೋಜಿಸಲಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಗಣ್ಯರ ಸಮ್ಮುಖದಲ್ಲಿ ನೀಡಲಾಗುವುದು. ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ದಾವಣಗೆರೆ ಅಧ್ಯಕ್ಷರಾದ ಕೆ.ಎಚ್ ಮಂಜುನಾಥ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ರಾಜೇಶ್. ಎಸ್.ದೇಸಾಯಿ ಬಾಗಲಕೋಟೆ