planting saplings at Sri Mauneshwar Park ಶಾಸಕರ ಹುಟ್ಟು ಹಬ್ಬದ ನಿಮಿತ್ಯ ಶ್ರೀ ಮೌನೇಶ್ವರ ಉದ್ಯಾನವನದಲ್ಲಿ ಸಸಿ ನೆಡುವ ಮೂಲಕ ವಿಶೇಷವಾಗಿ ಹುಟ್ಟು ಹಬ್ಬ ಆಚರಣೆ
ಇಳಕಲ್: ನಗರದ ವಿಶ್ವಕರ್ಮ ಸಮಾಜ ವತಿಯಿಂದ ರಾಜ್ಯ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ವಿಜಯಾನಂದ
ಎಸ್. ಕಾಶಪ್ಪನವರ ಅವರ ೫೪ನೇ ಹುಟ್ಟು ಹಬ್ಬದ ಅಂಗವಾಗಿ ನೂತನವಾಗಿ ಹನುಮಸಾಗರ ರಸ್ತೆಯ ಪಕ್ಕದಲ್ಲಿ ನಿರ್ಮಾಣವಾದ
ಶ್ರೀ ಮೌನೇಶ್ವರ ಉದ್ಯಾನವನದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಪುರಸಭೆ ಮಾಜಿ ಅಧ್ಯಕ್ಷ ವೆಂಕಟೇಶ ಸಾಕಾ, ನಗರಸಭೆ ಸದಸ್ಯರಾದ ಸುರೇಶ ಜಂಗ್ಲಿ, ಅಮೃತ ಬಿಜ್ಜಲ,
ಮೌಲೇಶ ಬಂಡಿವಡ್ಡರ, ಶರಣಮ್ಮ ತಿಮ್ಮಪೂರ, ರೇಷ್ಮಾ ಮಾರನಬಸರಿ, ಆಫ್ರೀನ್ ಸೋನಾರ, ನಜ್ಮಾಬೇಗಂ ಬನ್ನಿಗೋಳ.
ದಿಲೀಪ ದೇವಗಿರಿಕರ, ಮಲ್ಲು ಮಡಿವಾಳರ, ವಿಶ್ವನಾಥ ಕಾಳಗಿ ವಿಶ್ವಕರ್ಮ ಸಮಾಜದ ಮುಖಂಡರಾದ ವೀರಭದ್ರಪ್ಪ ಪತ್ತಾರ(ಹಿಪ್ಪರಗಿ),
ನಾರಾಯಣಪ್ಪ ಹೂಲಗೇರಿ, ಜಿತೇಂದ್ರ ಮಳಗಾವಿ ಹಾಗೂ ವಿಶ್ವಕರ್ಮ ಸಮಾಜದ ಹಿರಿಯರು, ಮಹಿಳೆಯರು,
ತರುಣ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಗಂಗಪ್ಪ ಅಡ್ಡೆದ ಪ್ರಾಸ್ತಾವಿಕವಾಗಿ ಮಾತನಾಡಿದರು, ವಿಶ್ವ ಬಡಿಗೇರ ಸ್ವಾಗತಿಸಿದರು,
ಮೌನೇಶ ಪತ್ತಾರ ನಿರೂಪಿಸಿದರು, ಮೌನೇಶ ತೊಟ್ಟಿಲ ವಂದಿಸಿದರು.