Basavachetana Award ರಾಜ್ಯ ಮಟ್ಟದ ಬಸವಚೇತನ ಪ್ರಶಸ್ತಿಗೆ ಆಯ್ಕೆಯಾದ ಶರಣಪ್ಪ ಹಲಕಾವಟಗಿ
ಬಾಗಲಕೋಟೆ : ಅಮ್ಮ ಪೌಂಡೇಶನ್ ದೇವರ ಹಿಪ್ಪರಗಿ- ವಿಜಯಪುರ ರಾಜ್ಯಮಟ್ಟದ ಬಸವ ಸಂಸ್ಕೃತಿ ಉತ್ಸವ -೨೦೨೫ ರಂದು
ಕೊಡ ಮಾಡುವ ರಾಜ್ಯ ಮಟ್ಟದ ಬಸವಚೇತನ ಪ್ರಶಸ್ತಿಯನ್ನು ಹುನಗುಂದ ತಾಲೂಕಿನ ಕೂಡಲಸಂಗಮದ ಪ್ರಗತಿಪರ
ರೈತ ಶರಣಪ್ಪ ಪರಪ್ಪ ಹಲಕಾಟವಗಿ ಆಯ್ಕೆಯಾಗಿದ್ದಾರೆ.
ಇವರು ಹಲವು ವರ್ಷಗಳಿಂದ ಕೃಷಿ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿ ಹೆಜ್ಜೆ ಗುರುತು ಮೂಡಿಸಿದ್ದಾರೆ.
ಇವರ ಅನುಪಮ ಸೇವೆ ಸಮಾಜ ಮುಖಿ ಬುದುಕಿಗೆ ಮಾದರಿಯಾಗಿದ್ದಾರೆ ಇವರ ಅಮೋಘ ಸೇವೆಯನ್ನು ಪರಿಗಣಿಸಿ
ದಿನಾಂಕ ೦೬-೦೭-೨೦೨೫ ರಂದು ವಿಜಯಪುರದ ಅಮ್ಮ ಪೌಂಡೇಶನ್ ಹಮ್ಮಿಕೊಂಡ ಬಸವ ಸಂಸ್ಕೃತಿ
ಉತ್ಸವದಲ್ಲಿ ರಾಜ್ಯ ಮಟ್ಟದ ಬಸವಚೇತನ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.
ವರದಿ: ಭೀಮಣ್ಣ ಗಾಣಿಗೇರ