accident ಕಾಡಗಿಹಳ್ಳ ಸಮೀಪದ ಹೆದ್ದಾರಿಯಲ್ಲಿ ಟಿಪ್ಪರ್ ಲಾರಿ ನಡುವೆ ಅಪಘಾತ ಚಾಲಕನಿಗೆ ಗಂಭೀರ ಗಾಯ
ಬಾಗಲಕೋಟ ಜಿಲ್ಲೆಯ ಇಳಕಲ್ಲ ಗ್ರಾಮೀಣ ಪೋಲಿಸ್ ಠಾಣೆಯ ವ್ಯಾಪ್ತಿಯ ಹುನಗುಂದ ಪಟ್ಟಣಕ್ಕೆ ತೆರಳುವ
ರಾಷ್ಟೀಯ ಹೆದ್ದಾರಿ ೫೦ ರ ಕಾಡಗಿಹಳ್ಳ ಸಮೀಪದ ಟಿಪ್ಪರ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದ
ಘಟನೆ ಜುಲೈ ೦೯ ಮಧ್ಯಾಹ್ನ ೩ ಗಂಟೆಯ ಸಂದರ್ಭ ನಡೆದಿದೆ.
ಲಾರಿ ಚಾಲಕನಿಗೆ ಗಂಭೀರ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಅಪಘಾತದಲ್ಲಿ ಲಾರಿಯ ಮುಂಭಾಗ ಸಂಪೂರ್ಣ ನುಚ್ಚು ಗುಚ್ಚಾಗಿದೆ.
ಘಟನಾ ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.