CA exam ಸಿ.ಎ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ರೋಹನ ಜೋಗಿನಗೆ ಸತ್ಕಾರ
ಇಳಕಲ್ : ನಗರದ ಮುನವಳ್ಳಿ ಪೇಟೆ ಹಳೇ ಬನಶಂಕರಿ ದೇವಿ ದೇವಸ್ಥಾನ ಸಿ.ಎ.ಪರೀಕ್ಷೆಯಲ್ಲಿ ತೇರ್ಗಡೆ
ಹೊಂದಿದ ರೋಹನ್ ಅಶೋಕ ಜೋಗಿನನ್ನು ಹಿರಿಯರು, ಮಹಿಳೆಯರು ಸತ್ಕರಿಸಿ ಗೌರವಿಸಿದರು.
ಇವರ ಸಾಧನೆಯಲ್ಲಿ ತಾಯಿಯ ಪರಿಶ್ರಮ, ಬನಶಂಕರಿ ದೇವಿಯ ಆಶೀರ್ವಾದ ನಿರಂತರ ಇದ್ದು
ಅತ್ಯುತ್ತಮ ಸಾಧನೆ ಮಾಡಿದ ರೋಹನ್ ಎಲ್ಲರಿಗೂ ಮಾದರಿ ಆಗಿದ್ದಾರೆ.
ಭವಿಷ್ಯದಲ್ಲಿ ಅವನ ಪ್ರಯತ್ನಗಳು ಫಲ ನೀಡಲಿ ಹಾಗೂ ಕನಸುಗಳು ಸಾಕಾರವಾಗಲೆಂದು
ಮಹಿಳೆಯರು ಹಾರೈಸಿ ಆಶೀರ್ವದಿಸಿದರು.