professional ವಿದ್ಯಾರ್ಥಿಯಿಂದ ವೃತ್ತಿಪರನ ಕಡೆಗೆ
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಹಾಗೂ ಯುನೈಟೆಡ್ ಎಫರ್ಟ್ಸ್ ಸಂಸ್ಥೆ ಹಾಗೂಎಲ್ ಎ.ಎಚ್.ಐ ಸಂಸ್ಥೆ ವತಿಯಿಂದ ಎರಡೂ ದಿನಗಳ ಕಾಲ ಆಯೋಜಿಸಲಾದ ವೃತ್ತಿಯೋಜನೆ ಕಾರ್ಯಕ್ರಮವು ಬಾಗಲಕೋಟ ಜಿಲ್ಲೆಯ ಜಂಟಿ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಬಾಗಲಕೋಟ ಮತ್ತು ಜಿಲ್ಲಾ ಸಮನ್ವಯಧಿಕಾರಿ ಬಾಗಲಕೋಟ ರವರ ಸಹಕಾರದೊಂದಿಗೆ, ಬಾಗಲಕೋಟ ಜಿಲ್ಲೆಯ ಶಿಕ್ಷಕರಿಗಾಗಿ ಎರಡು ದಿನಗಳ ವೃತ್ತಿ ಯೋಜನೆ ತರಬೇತಿ ಕಾರ್ಯಕ್ರಮವನ್ನು ಇಂದಿರಾ ಗಾಂಧಿ ವಸತಿ ಶಾಲೆ , ಸೆಕ್ಟರ್ ೮೮, ನವನಗರ ಬಾಗಲಕೋಟ ಶಾಲೆಯಲ್ಲಿ ಆಯೋಜಿಸಲಾಯಿತು.
ಒಟ್ಟು ಒಟ್ಟು ೨೯ ಶಾಲೆಗಳ ಸುಮಾರು ೫೮ ಶಿಕ್ಷಕರು ಈ ತರಬೇತಿಯಲ್ಲಿ ಭಾಗವಹಿಸಿದರು. ಈ ಕಾರ್ಯಕ್ರಮವನ್ನು ಬಾಗಲಕೋಟ ಜಿಲ್ಲೆಯ ಉಪನಿರ್ದೇಶಕರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಶ್ರೀ ಸದಾಶಿವ ಬಡಿಗೇರ, ಜಿಲ್ಲಾ ಸಮನ್ವಯಧಿಕಾರಿಗಳಾದ ಶ್ರೀ ಅಮರೇಶ ಬ್ಯಾಳಿಹಾಳ ಹಾಗೂ ಹಾಗೂ ಇಂದಿರಾ ಗಾಂಧಿ ವಸತಿ ಶಾಲೆ ಅಮಿನಗಡ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಜಯಶ್ರೀ ಮರನಾಳ ಮೇಡಮ್ ರವರು ಸೇರಿ ಪ್ರಾರಂಭಿಸಿದರು.
ಅವರ ಜೊತೆ ಯುನೈಟೆಡ್ ಎಫರ್ಟ್ಸ್ ಸಂಸ್ಥೆಯ ತರಬೇತಿಯ ಮುಖ್ಯಸ್ಥರಾದ ದೀಪಕ ಕುಮಾರ ಎಚ್ ಪಿ, ಬಾಗಲಕೋಟ ಜಿಲ್ಲೆಯ ಮುಖ್ಯಸ್ಥರಾದ ಸಮೇಲ ಗಾಡಿಕಾರ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಸುರೇಶ ಚೌಗಲಾ, ಚೇತನ್ ಕುಮಾರ್ ಎನ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಲಾಯಿತು.
ಈ ಸಂಧರ್ಭದಲ್ಲಿ ಉಪನಿರ್ದೇಶಕರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬಾಗಲಕೋಟ ಶ್ರೀ ಸದಾಶಿವ್ ಬಡಿಗೇರ ರವರು ಈ ತರಬೇತಿಯ ಉದ್ದೇಶಿಸಿ ಇದು ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ಆಯ್ಕೆ ಮಾಡಿಕೊಳ್ಳಲು ಉತ್ತಮ ಯೋಜನೆಯಾಗಿದ್ದು ಈ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕೆ ನಾವೆಲ್ಲರೂ ಸಹಕರಿಸಬೇಕು ಹಾಗೂ ನಮ್ಮ ಮಕ್ಕಳ ಒಂದು ಔದೋಗಿಕ ವಲಯ ಆಯ್ಕೆಗಳ ಬಾಗಿಲು ವಿದ್ಯಾರ್ಥಿಗಳನ್ನು ಹುಡುಕಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸತತ ಪ್ರಯತ್ನವನ್ನು ನಾವೆಲ್ಲರೂ ಮಾಡಬೇಕಾಗಿದ್ದು ಈ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಮ್ಮ ಜಿಲ್ಲೆಯಲ್ಲಿ ಅನುಷ್ಠಾನಗೊಂಡದ್ದು ನಮ್ಮ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ ಹಾಗೂ ನಮ್ಮ ಇಲಾಖೆಯು ಸಂಪೂರ್ಣವಾಗಿ ಈ ಕಾರ್ಯಕ್ರಮಕ್ಕೆ ಬೆಂಬಲ ನೀಡುತ್ತದೆ ಎಂದು ಮಾತನಾಡಿದರು.
ಜಿಲ್ಲಾ ಸಮನ್ವಯಧಿಕಾರಿಗಳಾದ ಅಮರೇಶ ಬ್ಯಾಲಿಹಳಿ ರವರು ಈ ತರಬೇತಿಯ ಉದ್ದೇಶ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ನಂತರ ಯಾವ ವೃತ್ತಿಯತ್ತ ಸಾಗಬೇಕು ಎಂಬುದನ್ನು ತಿಳಿದುಕೊಳ್ಳಲು ಸಹಾಯ ಮಾಡುವುದೆಂದು ಮಾತನಾಡಿದರು.
ನಂತರ ತರಬೇತಿಯ ಮುಖ್ಯಸ್ಥರಾದ ದೀಪ ಕುಮಾರ್ ಎಚ್ ಪಿ ಪ್ರಾಸ್ತವಿಕವಾಗಿ ಮಾತನಾಡಿ ನನ್ನ ಭವಿಷ್ಯ ನನ್ನ ಆಯ್ಕೆ ಕಾರ್ಯಕ್ರಮವು ವಿದ್ಯಾರ್ಥಿಗಳ ವೃತ್ತಿಗಳನ್ನು ಪರಿಚಯಿಸುವ ಕಾರ್ಯಕ್ರಮವಾಗಿದ್ದು ಇದು ಅವರ ಆಸಕ್ತಿ ಇದು ಅವರ ಆಸಕ್ತಿ ಮತ್ತು ಸಾಮರ್ಥ್ಯಗಳನ್ನು ವಿದ್ಯಾರ್ಥಿಗಳೇ ಗುರುತಿಸಿಕೊಂಡು ಆಯ್ಕೆ ಮಾಡಿಕೊಂಡು ಶೈಕ್ಷಣಿಕ ಅರ್ಹತೆಯನ್ನು ಪಡೆದು ಉತ್ತಮ ಜೀವನ ನಡೆಸಲು ಸಹಾಯಕವಾಗಿದೆ ಎಂದರು.