Electricity pole in danger ಇಳಕಲ್ದ ಕಂಠಿ ಸರ್ಕಲ್ದಲ್ಲಿ ಅಪಾಯದಲ್ಲಿ ವಿದ್ಯುತ್ ಕಂಬ !ದುರಸ್ಥಿ ಮಾಡ್ತರಾ ಅಧಿಕಾರಿಗಳು….
ಬಾಗಲಕೋಟ ಜಿಲ್ಲೆಯ ಇಳಕಲ್ದ ಕಂಠಿ ಸರ್ಕಲ್ ದಿಂದ ಊರಲ್ಲಿ ಹೋಗುವ ರಸ್ತೆಯ ಬದಿಯಲ್ಲಿ
ಇರುವ ವಿದ್ಯುತ್ ಸಿಮೆಂಟ್ ಕಂಬ ಕೊಳೆತು ಹೋಗುತ್ತಿದ್ದು ಕೆಳಗಡೆ ಸೀಳಿ ಹೋಗಿದ್ದು ಅಪಾಯಕ್ಕೆ ಆಹ್ವಾನವನ್ನು ನೀಡುತ್ತಿದೆ.
ಅರಳಿಕಟ್ಟಿಯವರ ಸಾಮಸಂಗ್ ಅಂಗಡಿ ಹತ್ತಿರ ಇರುವ ಈ ವಿದ್ಯುತ್ ಕಂಬದ ಮಗ್ಗಲು ಹೂವಿನ
ಹಾರಗಳನ್ನು ಮಾರಾಟ ಮಾಡುವ ಅಂಗಡಿಗಳು ಇವೆ ಆದರೆ ಆ ವಿದ್ಯುತ್ ಕಂಬ ಯಾವಾಗ ಕುಸಿದು
ಹೋಗುತ್ತೋ ಎಂಬ ಆತಂಕದಲ್ಲಿ ಅಲ್ಲಿನ ನಿವಾಸಿಗಳು ಇದ್ದಾರೆ.
ಹೆಸ್ಕಾಂ ಅಧಿಕಾರಿಗಳು ಇದರತ್ತ ಬೇಗನೆ ಗಮನ ಹರಿಸಿ ವಿದ್ಯುತ್ ಕಂಬವನ್ನು ಬದಲಿಸಿ
ಮುಂದಾಗಬಹುದಾದ ದೊಡ್ಡ ಅಪಾಯವನ್ನು ತಪ್ಪಿಸುತ್ತಾರೆನೋ ಕಾದು ನೋಡಬೇಕಾಗಿದೆ.