Kudalasangama ಕೂಡಲಸಂಗಮದಲ್ಲಿ ಆಂಗ್ಲ ಮತ್ತು ಹಿಂದಿ ಫಲಕಹಾಕಿ ಕಾರ್ಯಕ್ರಮ ವೇದಿಕೆಗೆ ಕರವೇ ಎಂಟ್ರಿ ಕನ್ನಡ ಫಲಕ ಹಾಕಿದ ಆಯೋಜಕರು
ಬಾಗಲಕೋಟೆ ಜಿಲ್ಲೆ ಕೂಡಲಸಂಗಮ : ಕರ್ನಾಟಕ ಗೋವಾ ಪ್ರಾಚಿತ ಮಹೇಶ್ವರಿ ಯುವ ಸಂಘ ಇಲಕಲ್ಲ ಇವರು ಕೂಡಲಸಂಗಮದ ಸಭಾಭವನದಲ್ಲಿ ಮಹೇಶ್ವರಿ ಉತ್ಸವ ಕಾರ್ಯಕ್ರಮದಲ್ಲಿ ಆಂಗ್ಲ ಮತ್ತು ಹಿಂದಿ ಫಲಕ(ಬ್ಯಾನರ್) ಗಳನ್ನು ಹಾಕಿದ್ದು ಕಂಡ ಹೆಚ್.
ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಕೂಡಲ ಸಂಗಮ ಗ್ರಾಮ ಘಟಕದ ಅಧ್ಯಕ್ಷ ಸಂಜಯಗೌಡ
ಗೌಡರ ಮತ್ತು ಸೋಹೈಲ್ ಸುತಾರ ನೇತೃತ್ವದಲ್ಲಿ ಕಾರ್ಯಕರ್ತರೊಂದಿಗೆ ಕಾರ್ಯಕ್ರಮ ನಡೆದ ಸಭಾಂಗಣಕ್ಕೆ
ಹೋಗಿ ಅನ್ಯ ಭಾಷೆಯಲ್ಲಿರುವ ಫಲಕಗಳನ್ನು ತೆರವುಗೊಳಿಸಿ ಘಟನೆ ನಡೆದಿದೆ.
ರಾಜ್ಯ ಸರ್ಕಾರದ ಆದೇಶದಂತೆ ಕನ್ನಡದಲ್ಲಿ ಫಲಕಗಳನ್ನು ಹಾಕಿದ ನಂತರವೇ ಕಾರ್ಯಕ್ರಮವನ್ನು ಆರಂಭಿಸಬೇಕು
ಎಂದು ಕರವೇ ಆಗ್ರಹಿಸಿತ್ತು. ಹೆಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರ ಒತ್ತಾಯಕ್ಕೆ ಮಣಿದು
ಕಾರ್ಯಕ್ರಮ ಆಯೋಜನೆ ಮಾಡಿದ ಸಂಘಟನೆಯ ಸದಸ್ಯರು ತಕ್ಷಣವೇ ಅನ್ಯ ಭಾಷೆಯ ಫಲಕಗಳನ್ನು ತೆರವುಗೊಳಿಸಿ
ಕನ್ನಡ ಫಲಕಗಳನ್ನು ಅಳವಡಿಸಿ ಸ್ಪಂದಿಸಿದರು.
ಈ ಸಂದರ್ಭದಲ್ಲಿ.ಶ್ರೀಶೈಲ ಹುದ್ದಾರ .ಶಂಕರ ಕುರಿ .ನಾಗೇಶಗಣಾಚಾರಿ.ತನ್ವೀರ ನದಾಫ್.ಮಣಿಕಂಠ ರೇವಡಿಹಾಳ .ವಿಕಾಸ ಚೌಧರಿ
ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.