Bagalkot MP ಎ.ಎಸ್.ಐ.ಇಲಾಖೆ ಪ್ರಾಚೀನ ಸ್ಮಾರಕಗಳನ್ನು ರಕ್ಷಣೆ ಜೊತೆಗೆ ಗಿಡಗಳನ್ನು ನೆಡುವ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ಬಾಗಲಕೋಟೆ ಸಂಸದರಾದ ಪಿ.ಸಿ.ಗದ್ದಿಗೌಡರ
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ನಿಸರ್ಗ ಬಳಗ, ಹಾಗೂ ಪ್ರಾದೇಶಿಕ ವಲಯ ಅರಣ್ಯ ಇಲಾಖೆಯ ಆಶ್ರಯದಲ್ಲಿ ರವಿವಾರ ಆಯೋಜಿಸಿಲಾಗಿದ್ದ (ಗ್ರೂಪ್ ಆಫ್ ಭೂತನಾಥ) ಭೂತನಾಥ ದೇವಾಲಯದ ಸಮುಚ್ಚಯಗಳ ಉದ್ಯಾನದಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಬಾಗಲಕೋಟೆ ಸಂಸದರಾದ ಪಿ.ಸಿ.ಗಡ್ಡಿಗೌಡ್ರ ಮಾತನಾಡಿ ಎ.ಎಸ್. ಐ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ,ನಿಸರ್ಗ ಬಳಗ, ಮತ್ತು ಪ್ರಾದೇಶಿಕ ವಲಯ ಅರಣ್ಯ ಇಲಾಖೆಯ ಸಹಯೋಗದಲ್ಲಿ ಈ ಕಾರ್ಯಕ್ರಮದಲ್ಲಿ ಸಂಸದರಾದ ಪಿ.ಸಿ.ಗದ್ಧಿಗೌಡ್ರ್ ಈ ಪರಿಸರ ಉಳಿಸಿ ಬೆಳೆಸುವ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಸ್ಮಾರಕಗಳ ರಕ್ಷಣೆ ಮತ್ತು ಪರಿಸರ ಸಂರಕ್ಷಿಸಲು ಬಾದಾಮಿ,ಪಟ್ಟದಕಲ್ಲು,ಮತ್ತು ಐಹೊಳೆ ಸ್ಮಾರಕಗಳ ಉದ್ಯಾನಗಳಲ್ಲಿ ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಪರಿಸರವನ್ನು ರಕ್ಷಿಸಲಾಗುವುದು ಎಂದು ಧಾರವಾಡ ವಲಯದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧೀಕ್ಷಕ ರಮೇಶ ಮೂಲಿಮನಿ ತಿಳಿಸಿದರು.
ಎರಡುನೂರಕ್ಕೂ ಹೆಚ್ಚು ಮಹೋಗಣಿ,ಸಿಲ್ವರ್ ಓಕ್,ಬಿದಿರು, ಬಸವನಪಾದ,ಸಪ್ತಸರಣಿ ಇನ್ನೂ ಮುಂತಾದ ಗಿಡಗಳನ್ನು ನಿಸರ್ಗ ಬಳಗದ ಸದಸ್ಯರು ಮತ್ತು ಎ.ಎಸ್. ಐ. ಸಿಬ್ಬಂದಿ ತಿಳಿಸಿದರು.
ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಅಧಿಕಾರಿ ಮಹೇಶ್ ಮರಿಯನ್ನವರ,ಎಸ್.ಡಿ.ಜೋಗಿನ್, ಎ. ಎಸ್. ಐ.ಉಪ ಅಧೀಕ್ಷಕ ಶ್ರಿಗುರುಪಾಗಿ, ಸುನೀಲಕುಮಾರ,,ನಿಸರ್ಗ ಬಳಗದ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.
ವರದಿ:- ರಾಜೇಶ್.ಎಸ್.ದೇಸಾಯಿ ಬಾಗಲಕೋಟೆ