Beereshwar Society ಬೀರೇಶ್ವರ ಸೊಸೈಟಿಯಿಂದ ಮರಣೋತ್ತ ಪರಿಹಾರ ನಿಧಿ ವಿತರಣೆ
ಇಳಕಲ್ಲ : ಜೋಲ್ಲೆ ಗ್ರೂಪಿನ ಅಂಗ ಸಂಸ್ಥೆಯಾಗಿರುವ ಶ್ರೀ ಬೀರೇಶ್ವರ ಕೋ ಆಫ್ ಕ್ರೆಡಿಟ್ ಸೊಸೈಟಿ
ಇಳಕಲ್ ಶಾಖೆಯಲ್ಲಿ ಸಾಲ ಪಡೆದಿದ್ದ ಅಕ್ಬರಬಾದಶಾ ಮಾರನಾಳ ಮರಣ ಹೊಂದಿದ್ದರಿAದ
ಅಮೂಲ್ಯ ಸಾಲ ಪಡೆದಿದ್ದು ಸದಸ್ಯ ಕಲ್ಯಾಣ ನಿಧಿಯಿಂದ ಲಭ್ಯವಿರುವ ಸದಸ್ಯರ ಮರಣೋತ್ತರ
ಪರಿಹಾರ ನಿಧಿ ೩೦,೦೦೦ ರೂ ಪರಿಹಾರ ಧನವನ್ನು ಅಕ್ಬರಬಾದಶಾ ಮಾರನಾಳ ಪತ್ನಿ ಸಕೀನಾ
ಅಕ್ಬರಬಾದಶಾ ಮಾರನಾಳ ಇವರಿಗೆ ಇಳಕಲ್ ಶಾಖೆಯ ಸಲಹಾ ಸಮಿತಿ ಸದಸ್ಯಪುನೀತ್
ಮೋಹನ್ ಹೊಸಮನಿ ವಿತರಿಸಿದರು.
ಈ ಸಮಯದಲ್ಲಿ ಶ್ರೀ ರಾಮ್ ಫೈನಾನ್ಸ್ ಶಾಖಾ ವ್ಯವಸ್ಥಾಪಕರು ಹಾಗೂ ಇಳಕಲ್ ಶಾಖಾ
ವ್ಯವಸ್ಥಾಪಕರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.