ಶ್ರೀಶೈಲದತ್ತ ಹೊರಟ ಪಾದಯಾತ್ರಿಗಳನ್ನು ಕಲ್ಯಾಣ ಕರ್ನಾಟಕ ಗ್ರಾನೈಟ್ ಕ್ವಾರಿಗಳ ಮಾಲಿಕರ ಸಂಘದ ಮತ್ತು ರೋಟರಿ ಸಂಸ್ಥೆಯ ವತಿಯಿಂದ ಸ್ವಾಗತಿಸಿ ಅವರಿಗೆ ಉಪಹಾರ ವ್ಯವಸ್ಥೆಯನ್ನು ಮಾಡಿದರು.
ಕಂಬಿಗಳನ್ನು ಹೊತ್ತುಕೊಂಡ ಬಂದ ಯಾತಾರ್ಥಿಗಳನ್ನು ಬಾಲನಗೌಡ ಪಾಟೀಲ ದಂಪತಿಗಳು ಸ್ವಾಗತಿಸಿ ಪೂಜೆಯನ್ನು ಸಲ್ಲಿಸಿದರು ನಂತರ ಬಂದ ಎಲ್ಲರಿಗೂ ಚೌಚೌ ಬಾತ್ ಉಪಹಾರವನ್ನು ನೀಡಿ ಮುಂದಿನ ಊರಿಗೆ ಬೀಳ್ಕೋಟ್ಟರು.
ಈ ಸಮಯದಲ್ಲಿ ರೋಟರಿ ಕ್ಲಬ್ ದ ಪ್ರಶಾಂತ ಹಂಚಾಟೆ, ಮುತ್ತುರಾಜ ಬೆಂಗಳೂರು, ಅಮರೇಶ ತುಗ್ಲಿ ಪ್ರವೀಣ ಕಡೂರ ಮತ್ತಿತರರು ಉಪಸ್ಥಿತರಿದ್ದರು.