ಗ್ರಾಮೀಣ ಭಾಗದಲ್ಲಿ ಜೋರಾದ ರಂಗಿನಾಟ : ಬಣ್ಣದಲ್ಲಿ ಮುಳುಗಿದ ಯುವಕರು
ಬಾಗಲಕೋಟ ಜಿಲ್ಲೆಯ ಇಳಕಲ್ ತಾಲೂಕಿನ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಬುಧವಾರದಂದು ರಂಗಿನಾಟವನ್ನು ಆಡಿದ ವರದಿಗಳು ಬಂದಿವೆ.
ಬಸ್ ನಿಲ್ದಾಣದಿಂದ ಹಳ್ಳಿ ಹಳ್ಳಿಗಳಿಗೆ ಹೋದ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಗಳು ಮತ್ತು ಪ್ರಯಾಣಿಕರು ಬಣ್ಣದಲ್ಲಿ ಮುಳುಗಿ ಬರುತ್ತಿದ್ದ ದೃಶ್ಯಗಳನ್ನು ಸಾಮಾನ್ಯವಾಗಿ ನೋಡಬಹುದಾಗಿತ್ತು.
ತಾಲೂಕಿನ ಗೊರಬಾಳ, ಇಂಗಳಗಿ, ಹೇರೂರ, ತುಂಬ, ಜಂಬಲದಿನ್ನಿ, ಕರಡಿ ಬೂದಿಹಾಳ ಎಸ್ ಕೆ ಕೋಡಿಹಾಳ ನಂದವಾಡಗಿ, ಕಂದಗಲ್ಲ, ಹಿರೇಸಿಂಗನಗುತ್ತಿ , ಹಿರೇಓತಗೇರಿ, ಚಿಕ್ಕಸಿಂಗನಗುತ್ತಿ,ಹಿರೇಕೊಡಗಲಿ, ಚಿಕ್ಕಕೊಡಗಲಿ, ಗುಗ್ಗಲಮರಿ, ಹೊಸೂರ, ಬಲಕುಂದಿ ಮುಂತಾದ ಗ್ರಾಮಗಳಲ್ಲಿ ಯುವಕರ ಬಣ್ಣದಾಟ ಜೋರಾಗಿ ನಡೆದಿತ್ತು.