Rameshwaram Cafe blast: ಕೊನೆಗೂ ಬಾಂಬರ್ ಗಳ ಬಂಧನ, ಬಂಗಾಳದಲ್ಲಿ ಇಬ್ಬರು ಶಂಕಿತರು NIA ವಶಕ್ಕೆ!

WhatsApp Group Join Now
Telegram Group Join Now
Instagram Group Join Now
Spread the love

RAMESHWARAM CAFE BLAST

Rameshwaram Cafe blast: ಕೊನೆಗೂ ಬಾಂಬರ್ ಗಳ ಬಂಧನ, ಬಂಗಾಳದಲ್ಲಿ ಇಬ್ಬರು ಶಂಕಿತರು NIA ವಶಕ್ಕೆ!

ಬೆಂಗಳೂರಿನ ರಾಮೇಶ್ವರಂ ಸ್ಫೋಟದ ಆರೋಪಿಗಳನ್ನ ಒಂದೂವರೆ ತಿಂಗಳು ಕಳೆಯೋದೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆ ಪ್ರಕರಣದ ಮಾಸ್ಟರ್ ಮೈಂಡ್ ಅಲ್ಲಿ ಸ್ಫೋಟಗಳನ್ನು ಅಳವಡಿಸಲು ಹಾಗೂ ಅವರಿಗೆ ಸಹಾಯ ಮಾಡಿದನು ಸೇರಿದ ಹಾಗೆ ಮೂವರನ್ನ ಬಂಧಿಸಲಾಗಿದೆ ಅಂತ NIA ಹೇಳಿದೆ. ಹಾಗೆ ಇಬ್ಬರು ಪ್ರಮುಖ ಆರೋಪಿಗಳನ್ನು ಕೊಲ್ಕತ್ತದಲ್ಲಿ ಶುಕ್ರವಾರ ಬಂಧಿಸಿದ್ದಾರೆ.

ಈ ಇಬ್ಬರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು

ಹಾಗಾದ್ರೆ ಇವರನ್ನ ಬಂಧಿಸಿದ್ದು ಎಲ್ಲಿ ಯಾರು ಈ ಆರೋಪಿಗಳು ಇವರ ಹಿನ್ನೆಲೆ ಏನು ಬನ್ನಿ ನೋಡೋಣ.

ಇದೇ ಮಾರ್ಚ್ ಒಂದನೇ ತಾರೀಖು ವೈಟ್ ಫೀಲ್ಡ್ನ ಕೆಫೆಯೊಂದರಲ್ಲಿ ನಡೆದ ಸ್ಫೋಟ ಇಡೀ ಬೆಂಗಳೂರು ಹಾಗೆ ಮಾಡಿತ್ತು. ಸಾಕಷ್ಟು ವರ್ಷಗಳಿಂದ ಸ್ಪೋಟಗಳ ಸದ್ದಿಲ್ಲದೆ ಶಾಂತವಾಗಿದ್ರು, ಬೆಂಗಳೂರಲ್ಲಿ ಅದರಲ್ಲೂ ಅತ್ಯಂತ ಜನನಿಬಿಡ ಹಾಗು ಅತಿ ಹೆಚ್ಚು ಟೆಕ್ಕಿಗಳೇ ತುಂಬಿರುವ ಪ್ರದೇಶದಲ್ಲಿ ನಡೆದ ಈ ಸ್ಫೋಟ ನಿಜಕ್ಕೂ ಆತಂಕಕ್ಕೆ ಕಾರಣವಾಗಿತ್ತು.

ಅದೃಷ್ಟವಶಾತ್ ಅಲ್ಲಿ ಉಗ್ರರಿಗೆ ಸ್ಫೋಟಗಳನ್ನು ಸಿದ್ಧಪಡಿಸುವ ಸಂಪೂರ್ಣ ಕಲೆ ಕರಗತವಾಗಿರಲಿಲ್ಲ ಅನ್ನೋ ಕಾರಣಕ್ಕೆ ಮತ್ತು ಅಲ್ಲಿನಲಾಗಿದ್ದ ಶಕ್ತಿಶಾಲಿ IED ಮೇಲ್ಮುಖವಾಗಿ ಸ್ಫೋಟಗೊಂಡ ಕಾರಣಕ್ಕೆ ಹೆಚ್ಚು ಸಾವು ನೋವುಗಳು ವರದಿಯಾಗಿರಲಿಲ್ಲ. ಆದರೆ ಸುಮಾರು ಒಂಬತ್ತು ಮಂದಿ ಗಾಯಗೊಂಡಿದ್ದರು.  ಮೇಲ್ಮಾ ಛಾವಣೆ ನಾಶವಾಗಿತ್ತು.

ಇದೆಲ್ಲದಕ್ಕಿಂತ ಹೆಚ್ಚಾಗಿ ಬೆಂಗಳೂರಿನ ಜನರಲ್ಲಿ ಭಯ ಬಿತ್ತುವಲ್ಲಿ ಉಗ್ರರು ಯಶಸ್ವಿಯಾಗಿದ್ದಾರೆ. ಈ ಸ್ಫೋಟ ಪ್ರಕರಣವನ್ನು ಮಾರ್ಚ್ ಮೂರನೇ ತಾರೀಕು ರಾಷ್ಟ್ರೀಯ ತನಿಖಾ ದಳ ತನ್ನ ಕೈಗೆ ತೆಗೆದುಕೊಂಡಿತ್ತು. ಆ ನಂತರ ಕರ್ನಾಟಕದಲ್ಲಿ ಕೆಫೆ ಸ್ಪೋಟದ   ಬಗ್ಗೆ ತನಿಖೆ ಆರಂಭ ಆಯ್ತು

ಈ ಹಿಂದೆ ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದ ಆರೋಪಿಗಳನ್ನ ಜೈಲುಗಳಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. ಹಾಗೆ ಬಳ್ಳಾರಿ ಮಾಡಿರುವ ವಿಚಾರಣೆ ಕೂಡ ನಡೆಯಿತು. ಇಲ್ಲಿ ಬಾಂಬ್ ಸ್ಫೋಟಕ್ಕೆ ಬಳಕೆಯಾಗಿದ್ದ ವಸ್ತುಗಳ ಆಧಾರದ ಮೇಲೆ ಇದು ಹಿಂದೆ ಮಂಗಳೂರಲ್ಲಿ ನಡೆದ ಕುಕ್ಕರ್ ಸ್ಫೋಟ ಪ್ರಕರಣ ಏನಿತ್ತು?

ಅದರ ಜೊತೆಗೆ ತಾಳೆ ಆಗ್ತಾ ಇದೆ ಅನ್ನೋದು ಗೊತ್ತಾಯ್ತು. ಇನ್ನು ಅಲ್ಲಿ ಸ್ಪೋಟಗಳನ್ನು ಇಟ್ಟವರು ಯಾರು ಅನ್ನೋದನ್ನ ಸ್ಪಷ್ಟವಾಗಿ ಹೇಳೋದಿಕ್ಕೆ ಗುರುತಿಸುವುದಕ್ಕೆ ಯಾವ ಸಾಕ್ಷಾಧಾರಗಳೂ ಇರಲಿಲ್ಲ. ಅಲ್ಲಿದ್ದದ್ದು ಒಂದೇ ಒಂದು ಸೀಟ ಈ ವಿಡಿಯೋ ಮಾತ್ರ ಅದರಲ್ಲಿ ಕಪ್ಪು ಪ್ಯಾಂಟ್ ಹಾಗೂ ಕಪ್ಪು ಶೂ ಧರಿಸಿದ್ದ ವ್ಯಕ್ತಿಯೊಬ್ಬ

ಆತುರಾತುರವಾಗಿ ರಸ್ತೆಯಲ್ಲಿ ನಡ್ಕೊಂಡು ಹೋಗ್ತಿದ್ದಾರೆ. ಅವನು ತಲೆಗೆ ಕ್ಯಾಪ್ ಧರಿಸಿದವನ್ನ ನೋಡಿದ್ರೆ ಇಪ್ಪತ್ತೈದರಿಂದ ಮೂವತ್ತೈದರ ನಡುವಿನ ಯುವಕನಂತೆ ಕಾಣುತ್ತಿದ್ದ ಇಷ್ಟು ಬಿಟ್ಟರೆ ಅಲ್ಲಿ ಆರೋಪಿಗಳನ್ನು ಗುರುತಿಸುವುದಕ್ಕೆ ಯಾವ ಬೇರೆ ಸುಳಿವು ಸಾಕ್ಷಿಗಳು ಇರಲಿಲ್ಲ.

ಆದರೆ ಈ ತನಿಖೆ ಕೈಗೆತ್ತಿಕೊಂಡ ಇದರ ಎಲ್ಲ ಆಂಗಲ್‌ಗಳನ್ನು ಪರೀಕ್ಷೆ ಮಾಡೋಕೆ ಶುರುಮಾಡಿತು.

 ಇಲ್ಲಿ ಕೂಡ ಸ್ಫೋಟಕ್ಕೆ ಬಳಸಿದ ವಸ್ತುಗಳು, ಆ ಸ್ಫೋಟಕ ಸಾಮಗ್ರಿಗಳನ್ನು ತಯಾರು ಮಾಡಿದ ರೀತಿಯನ್ನ ಗಮನಿಸಿದ ತನಿಖಾಧಿಕಾರಿಗಳಿಗೆತಕ್ಷಣ ನೆನಪಾಗಿದ್ದು, ಮಂಗಳೂರಲ್ಲಿ ನಡೆದಿದ್ದ ಕುಕ್ಕರ್ ಸ್ಪೋಟ. ಇದೇ ಕುಕ್ಕರ್ ಬಾಂಬ್ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಯನ್ನ ಕೂಡ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಈ ಪ್ರಕರಣದಲ್ಲಿ ಶಿವಮೊಗ್ಗ ಮೂಲದ ಶಾಕಿರ್ ಮತ್ತು ಸೈಯದ್ ಯಾಸಿನ್ ಇಬ್ಬರನ್ನು ಬಂಧಿಸಲಾಗಿತ್ತು.

ಹಾಗೆ ಮಂಗಳೂರು ಮೂಲದ ಮಾಜಿ ಮುನೀರ್‌ನನ್ನು ಕೂಡ ಈ ಪ್ರಕರಣದಲ್ಲಿ ಬಂಧನಕ್ಕೆ ಈಡು ಮಾಡಲಾಗಿತ್ತು ಅಷ್ಟೇ ಅಲ್ಲ ಈ ಪ್ರಕರಣ ಕರ್ನಾಟಕದ ಮಲೆನಾಡಿನಲ್ಲಿ ತಲೆಯೆತ್ತಿದ ಐಸಿಸ್ ಉಗ್ರರ ನೆಟ್ ವರ್ಕ್ ಬಗ್ಗೆ ತನಿಖಾಧಿಕಾರಿಗಳಿಗೆ ಮಾಹಿತಿಯನ್ನು ಕೊಟ್ಟಿತು. ಅಲ್ಲಿ ತುಂಗಾನದಿ ತೀರದಲ್ಲಿ ಬಾಂಬ್ ಸ್ಫೋಟದ ಪ್ರಾತ್ಯಕ್ಷಿಕೆಗಳನ್ನು ನಡೆಸಲಾಗಿತ್ತು.

ಬಂಧಿತರು ಐಸಿಸ್ ನ ಸಂಪರ್ಕದಲ್ಲಿದ್ದು, ಇಸ್ಲಾಮಿಕ್ ಸ್ಟೇಟ್ ರಚನೆಯ ಉದ್ದೇಶವನ್ನು ತಲೆಗೆ ತುಂಬಿಕೊಂಡು ಮತ್ತು ಕಟ್ಟರ್ ಇಸ್ಲಾಂ ಅವರ ತಲೆ ಕಡಿಸಿತ್ತು. ಅನ್ನೋದು ಗೊತ್ತಾಗಿತ್ತುಷ್ಟೇ ಅಲ್ಲಈ ನೆಟ್‌ವರ್ಕ್ ಬೆಂಗಳೂರಿನ ಸುದ್ದುಗುಂಟೆಪಾಳ್ಯಕ್ಕೆ ಕೂಡ ಆಗ್ತಾ ಇದೆ. 2020 ರಲ್ಲಿ ಸುದ್ದಗುಂಟೆಪಾಳ್ಯದ ಮೆಹಬೂಬ್ ಪಾಷಾ ನನ್ನ NIA ತಂಡ ಬಂಧಿಸಿದೆ.

ತಮಿಳುನಾಡಲ್ಲಿ ಹಿಂದೂ ಸಂಘಟನೆಗಳ ನಾಯಕರನ್ನ ಟಾರ್ಗೆಟ್ ಮಾಡಿಕೊಂಡು ಕೊಲೆ ಮಾಡುವ ಉದ್ದೇಶದಿಂದ ಈ ತಂಡ ಸಕ್ರಿಯವಾಗಿ ಕೆಲಸ ಮಾಡ್ತಾ ಇತ್ತು ಈ ಮಾಹಿತಿ ಗೊತ್ತಾದ ಕೂಡಲೇ,ಎನ್‌ಐಎ ಅಧಿಕಾರಿಗಳು ಸುದ್ದುಗುಂಟೆಪಾಳ್ಯದ ಮೇಲೆ ದಾಳಿ ಮಾಡ್ತಾರೆ. ಈ ಮಹಬೂಬ್ ಪಾಷಾ ಸೇರಿದ ಹಾಗೆ ಹನ್ನೆರಡಕ್ಕೂ ಹೆಚ್ಚು ಮಂದಿಯನ್ನುನಾನಾ ಕಡೆಗಳಲ್ಲಿ ಬಂಧಿಸಿದ್ದಾರೆ. ಇವರ ವಿಚಾರಣೆ ವೇಳೆ ಗೊತ್ತಾಗಿದ್ದೇನೆಂದರೆ ಈ ತಂಡ ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ಕೂಡ ವ್ಯಾಪಿಸಿಕೊಂಡಿದೆ.

ಇನ್ನು ಈ ಮೆಹಬೂಬ್ ಪಾಷಾ ತನ್ನ ತಂಡದ ಸದಸ್ಯರಿಗೆ ಬಾಂಬ್ ಹಾಗೂ ಆಯುಧಗಳ ತರಬೇತಿ ಕೊಡಿಸಿದ್ದ ಅದಕ್ಕಾಗಿ ಕರ್ನಾಟಕ ಹಾಗೂ ತಮಿಳುನಾಡಿನ ಕಾಡುಗಳಲ್ಲಿ ತರಬೇತಿ ಶಿಬಿರಗಳನ್ನು ಆಯೋಜನೆ ಮಾಡಲಾಗುತ್ತಿತ್ತು ಆ ಕೆಲಸಕ್ಕೆ ನಿಯೋಜಿತನಾಗಿದ್ದ ಅವನು ತೀರ್ಥಹಳ್ಳಿಯ ಅಬ್ದುಲ್ ಇಂತ

ಅವರ ಬಂಧನಕ್ಕೆ NIA ಅತ್ತ ಅಂದರೆ 2020 ರಲ್ಲಿ ಪ್ರಯತ್ನಗಳ ಆರಂಭ ಮಾಡಿತು. ಬೆಂಗಳೂರಿನ ತಂಡದ ಬಂಧನವಾದ ಕೂಡಲೇ ಈತ ತೀರ್ಥಹಳ್ಳಿ ಬಿಟ್ಟ  ಅವನು ತಲೆಗೆ NIA 10,00,000 ರೂಪಾಯಿಗಳ ಇನಾಮು ಘೋಷಣೆ ಮಾಡಿತ್ತು. ಆನಂತರ ಅವನು ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಕೇರಳ,ಮಹಾರಾಷ್ಟ್ರ ಪಶ್ಚಿಮ ಬಂಗಾಳ ಹೀಗೆ ನಾನಾ ಕಡೆಗಳಲ್ಲಿ ತಲೆ ತಪ್ಪಿಸಿಕೊಂಡು ಓಡಾಡೋಕೆ ಶುರುಮಾಡಿದ. ಅವನ ಪತ್ತೆಗಾಗಿ ಪ್ರಯತ್ನಗಳನ್ನು ಮಾಡ್ತಾ .ಈ ಮಧ್ಯೆ  ಮೊನ್ನೆ ಬೆಂಗಳೂರಿನ ಕೆಫೆ ಸ್ಫೋಟ ಪ್ರಕರಣದ ಹಿಂದೆ ಕೂಡ ಇದ್ದಾನೆ ಅನ್ನೋದು ಎನ್‌ಐಎ ಅಧಿಕಾರಿಗಳಿಗೆ ಗೊತ್ತಾಗಿತ್ತು.

ಇನ್ನು ಬಂಧನ ತಪ್ಪಿಸಿಕೊಳ್ಳಲು ಇಬ್ಬರೂ ಶಂಕಿತ ಉಗ್ರರು ಅಸ್ಸಾಂ ಮತ್ತು ಬಂಗಾಳದಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದರು ಎಂದು ಹೇಳಲಾಗಿದೆ. ಆದರೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ್ದ ಎನ್ಐಎ ತಂಡ ಇದೀಗ ಇಬ್ಬರೂ ಶಂಕಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.


Spread the love

Leave a Comment

error: Content is protected !!