ಇಳಕಲ್ ನಗರಸಭೆ ಸದಸ್ಯ ಗ್ರಾನೈಟ್ ಉದ್ಯಮಿ ಶ್ರೀನಿವಾಸ ಸುರಪುರ ಇನ್ನಿಲ್ಲ
ಇಳಕಲ್ಲ ನಗರಸಭೆಯ ಸದಸ್ಯ , ಪ್ರತಿಷ್ಠಿತ ಹಣಕಾಸು ಸಂಸ್ಥೆ ಅರ್ಬನ್ ಬ್ಯಾಂಕ್ ನಿರ್ದೇಶಕ ವಾಲ್ಮೀಕಿ ಸಮಾಜದ ಶ್ರೀನಿವಾಸ ಹನಮಂತಪ್ಪ ಸುರಪುರ (೪೦) ಹೃದಯಾಘಾತದಿಂದ ಹೈದರಾಬಾದ್ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ೧೦ ಗಂಟೆಗೆ ನಿಧನರಾದರು. ಮೃತರಿಗೆ ಪತ್ನಿ ಓರ್ವ ಪುತ್ರ ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧು ಬಳಗ ಇದೆ.
ಸುರಪುರ ಮನೆತನದ ಕೆಪಿಸಿಸಿ ಸದಸ್ಯ ಶಾಂತಕುಮಾರ ಸುರಪುರ ಬಿಜೆಪಿ ಧುರೀಣ ದುರಗೋಜಿ ಸುರಪುರ ಅವರ ಸಹೋದರರ ಮಗನಾಗಿ ಚಿಕ್ಕ ವಯಸ್ಸಿನಲ್ಲೇ ರಾಜಕೀಯವಾಗಿ ಸಾಮಾಜಿಕವಾಗಿ ಧಾರ್ಮಿಕವಾಗಿ ಸಾಕಷ್ಟು ಹೆಸರು ಮಾಡಿದ್ದ ಶ್ರೀನಿವಾಸ ಸುರಪುರ ಅರ್ಬನ್ ಬ್ಯಾಂಕ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಸಂತಾಪ : ಶ್ರೀನಿವಾಸ ಸುರಪುರ ನಿಧನಕ್ಕೆ ಇಳಕಲ್ ಶ್ರೀಮಠದ ಗುರುಮಹಾಂತಶ್ರೀಗಳು, ಶಾಸಕ ವಿಜಯಾನಂದ ಕಾಶಪ್ಪನವರ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೀಣಾ ಕಾಶಪ್ಪನವರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಅರವಿಂದ ಮಂಗಳೂರ, ನಗರಸಭೆಯ ಪೌರಾಯುಕ್ತ ರಾಜಾರಾಮ ಪವಾರ ಸದಸ್ಯರಾದ ಲಕ್ಷ್ಮಣ ಗುರಂ ಸೇರಿದಂತೆ ಪ್ರಮುಖರು ಶೋಕ ವ್ಯಕ್ತಪಡಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.