corrupt ಭೃಷ್ಟ ವ್ಯವಸ್ಥೆ ಕೋಮುವಾದದಷ್ಟೇ ಅಪಾಯಕಾರಿ: ವೆಲ್ಫೇರ್ ಪಾರ್ಟಿ
ಬೆಂಗಳೂರು: ರಾಜ್ಯದಲ್ಲಿ ಹಿಂದಿನ ಸರಕಾರದ ಕೋಮುವಾದ ಭೃಷ್ಟಾಚಾರದಿಂದ ಬೇಸತ್ತ ಜನರು ಕಾಂಗ್ರೆಸ್ ಗೆ ಭಾರೀ ಬಹುಮತ ನೀಡಿ ಚುನಾಯಿಸಿ ಅವಕಾಶ ನೀಡಿದರು. ಆದರೆ ಈ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಕೂಡಾ ಜನರನ್ನು ವಂಚಿಸಿ ಭೃಷ್ಟಾಚಾರದಲ್ಲಿ ಭಾಗಿಯಾದ ವರದಿಗಳು ಬಹಿರಂಗವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ಕರ್ನಾಟಕ ರಾಜ್ಯ ಅಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಹೇಳಿದ್ದಾರೆ.
ಮುಂದುವರೆದು ಮಾತನಾಡಿ ಇದು ಕೋಮುವಾದದಷ್ಟೇ ಅಪಾಯಕಾರಿ ಕೋಮುವಾದದಂತೆ ಭೃಷ್ಟಾಚಾರವು ರಾಜ್ಯದ ಹಿತ ದೃಷ್ಟಿಯಿಂದ ಕೊನೆಗಾಣಬೇಕಾಗಿದೆ.
ಮತ ನೀಡಿ ಚುನಾಯಿಸಿದ ಜನರ ಹಿತಕ್ಕಿಂತ ಪಕ್ಷದ ಹಿತಾಸಕ್ತಿ ಮತ್ತು ಸ್ವಾರ್ಥಹಿತಾಸಕ್ತಿಯೇ ಮುಖ್ಯ ಎಂಬುದು ಎದ್ದು ಕಾಣುತ್ತಿದೆ. ಇಲ್ಲಿ ಯಾರೂ ಸುಭಗರಲ್ಲ ಎಂದು ಮಾಧ್ಯಮಗಳ ವರದಿಗಳು ಬಹಿರಂಗ ಪಡಿಸುತ್ತದೆ.
ಸಮುದಾಯದ ಅಭಿವೃದ್ಧಿ ನಿಗಮಗಳು ಸೇರಿದಂತೆ ಇನ್ನಿತರ ಮಂಡಳಿಗಳಲ್ಲಿ ಕಳೆದ ವರ್ಷಗಳಲ್ಲಿಯೇ ಸುಮಾರು ನಾಲ್ಕು ನೂರು ಕೋಟಿ ರೂಪಾಯಿಗೂ ಮಿಕ್ಕಿದ ಮೊತ್ತವನ್ನು ಅಕ್ರಮವಾಗಿ ಅನಧಿಕೃತ ಖಾತೆಗಳಿಗೆ ಜಮೆ ಮಾಡಿ ಪಲಾನುಭವಿಗಳಿಗೆ ಸಲ್ಲಬೇಕಾಗಿದ್ದ ಹಣವನ್ನು ದುರುಪಯೋಗ ಪಡಿಸಲಾಗಿದೆ. ಈ ಅವಧಿಯಲ್ಲಿ ಸಿದ್ದರಾಮಯ್ಯರ ಅವಧಿಯೂ ಸೇರಿದಂತೆ, ಜಗದೀಶ್ ಶೆಟ್ಟರ್, ಯಡಿಯೂರಪ್ಪ, ಕುಮಾರಸ್ವಾಮಿ, ಬಸವರಾಜ್ ಬೊಮ್ಮಾಯಿ ಕೂಡಾ ಮುಖ್ಯ ಮಂತ್ರಿಯಾಗಿದ್ದರು. ಈ ಬಗ್ಗೆಯೂ ತನಿಖೆ ನಡೆಯಬೇಕು ಎಂದು ಹೇಳಿದರು. ಈಗ ವಿಧಾನ ಸಭೆಯಲ್ಲಿ ಭೃಷ್ಟಾಚಾರ ಅಕ್ರಮ ತಡೆಯುವ ಮಾತನಾಡುವ ಆರ್ ಅಶೋಕ್ ಕಂದಾಯ ಸಚಿವರಾಗಿದ್ದಾಗ ಬೆಳೆ ನಷ್ಟ ಪರಿಹಾರದಲ್ಲೂ ಅಕ್ರಮ ನಡೆದಿದೆ. ಸಂಬAಧವೇ ಇಲ್ಲದ ಅನ್ಯ ಖಾತೆದಾರರ ಖಾತೆಗೆ ಕೋಟ್ಯಂತರ ರೂಪಾಯಿ ಪಾವತಿಯಾದ ಬಗ್ಗೆ ಚರ್ಚೆ ನಡೆಯುತ್ತಿದೆ. ಪರಸ್ಪರ ಸೇಡಿನ ರಾಜಕೀಯ ಮಾಡಿ ಜನರನ್ನು ವಂಚಿಸಬೇಡಿ.
ವಾಲ್ಮೀಕಿ ನಿಗಮದ ಹಗರಣ ಬೆಳಕಿಗೆ ಬಂದ ಮೇಲೆ ಬಿಜೆಪಿ ಆಡಳಿತಾವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಪರಿಶೀಲನೆಗೆ ಸರಕಾರ ಸಿದ್ಧವಾಯಿತು. ಬಿಜೆಪಿ ವಿರುದ್ಧ ಆರೋಪ ಕೇಳಿ ಬಂದಾಗ ಕೇಂದ್ರದಿAದ ಇ.ಡಿ ಓಡೋಡಿ ರಾಜ್ಯಕ್ಕೆ ಬಂತು. ಈ ಎರಡೂ ನಡೆಯನ್ನು ಪರಸ್ಪರ ಟೀಕಿಸುತ್ತಿದ್ದಾರೆ. ಈಗ ಇ.ಡಿ ಯ ಮೇಲೆ ಕೇಸನ್ನೂ ದಾಖಲಿಸಲಾಗಿದೆ. ಮುಖ್ಯಮಂತ್ರಿಗಳ ಹೆಸರು ಹೇಳುವಂತೆ ಇ.ಡಿ ಅಧಿಕಾರಿಗಳು ಒತ್ತಡ ಹೇರುತ್ತಿರುವ ಆರೋಪಗಳು ಕೇಳಿ ಬರುತ್ತಿವೆ. ಇದು ಸಭ್ಯ ರಾಜಕಾರಣವಲ್ಲ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಇದು ಉತ್ತಮ ಬೆಳವಣಿಗೆಯಲ್ಲ. ಭ್ರಷ್ಟಾಚಾರವನ್ನು ತೊಡೆದು ಹಾಕಲಿ ಅಪರಾಧಿಗಳು ಕಾನೂನಿನಿಂದ ತಪ್ಪಿಸಲು ಅವಕಾಶ ನೀಡದೆ ಪ್ರಾಮಾಣಿಕ ರೀತಿಯ ಪ್ರಯತ್ನ ಮಾಡಿ, ರಾಜ್ಯದ ಜನರ ಅಭಿವೃದ್ದಿಯತ್ತ ಗಮನಹರಿಸಲು ಆಡಳಿತ ಮತ್ತು ವಿರೋಧಪಕ್ಷ ಗಮನ ಹರಿಸಲಿ ಎಂದೂ ಅವರು ಆಗ್ರಹಿಸಿದರು.