ಮೋದಿ ಹಾಗೂ ಗದ್ದಿಗೌಡರ ಗೆಲುವಿಗಾಗಿ ದೀರ್ಘ ದಿಂಡ ನಮಸ್ಕಾರ ಹಾಕಿದ ಅಭಿಮಾನಿ
ಬಾಗಲಕೋಟ : ೩ ನೇ ಬಾರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರು ಮತ್ತು ೫ನೇ ಬಾರಿಗೆ ಬಾಗಲಕೋಟ ಸಂಸದ ಪಿ.ಸಿ.ಗದ್ದಿಗೌಡರ ಸಂಸದರಾಗಿ ಆಯ್ಕೆಯಾಗಲೆಂದು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಉತ್ತೂರು ಗ್ರಾಮದ ವಸಂತ ಸೋನಾರ ಮುಧೋಳದಿಂದ ಬಾದಾಮಿ – ಬನಶಂಕರಿ ದೇವಸ್ಥಾನದ ವರಿಗೂ ದೀರ್ಘ ದಿಂಡ ನಮಸ್ಕಾರ ಹಾಕಿ ಸೋಮವಾರದಂದು ಸಾಯಂಕಾಲ ೫ ಗಂಟೆಗೆ ಮುಕ್ತಾಯಗೊಳಿಸಿದರು.
ಈ ಸಮಯದಲ್ಲಿ ಬಾಗಲಕೋಟ ಸಂಸದ ಪಿ.ಸಿ.ಗದ್ದಿಗೌಡರ ದೀರ್ಘ ದಿಂಡ ನಮಸ್ಕಾರ ಹಾಕಿದ ವಸಂತ ಸೋನಾರ ಅವರನ್ನು ಗೌರವಿಸಿ ಸತ್ಕರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ನಾಗರಾಜ ಕಾಚಟ್ಟಿ, ಮುಖಂಡರಾದ ಮುತ್ತು ಊಳ್ಳಾಗಡ್ಡಿ, ಶಿವು ಹಾದಿಮನಿ, ಪುರಸಭೆ ಸದ್ಯಸ ಮಹಾಂತೇಶ ತಳವಾರ ಉಪಸ್ಥಿತರಿದ್ದರು.