ಗ್ರಾಮಸ್ಥರಿಗೆ ಕಾಟ ಕೊಡುತ್ತಿದ್ದ ಕೋತಿ ಸೆರೆ
ಇಳಕಲ್ಲ: ತಾಲೂಕಿನ ಹೇರೂರ ಗ್ರಾಮದಲ್ಲಿ ಕೋತಿಯ ಉಪಟಳ ಹೆಚ್ಚಾಗಿದ್ದು ಅದರ ಕಾಟಕ್ಕೆ ಗ್ರಾಮಸ್ಥರು ಬೇಜಾರುಗೊಂಡಿದ್ದರು.
ಕೋತಿಯ ಉಪಟಳ ಗ್ರಾಮದ ಎಲ್ಲಾ ಮನೆಗಳಲ್ಲಿ ಅತಿಯಾಗಿದ್ದು ಮನೆಯಲ್ಲಿನ ವಸ್ತುಗಳು ಹಾಳಾಗುವ ಜೊತೆಗೆ ಎಷ್ಟೋ ಜನರಿಗೆ ಅದು ಕಡಿದು ಗಾಯಗೊಂಡ ಪ್ರಕರಣಗಳು ಜನತೆಗೆ ಆತಂಕಕ್ಕೆ ತಳ್ಳಿತ್ತು.
ಕೋತಿಯ ಉಪಟಳ ತಪ್ಪಿಸಿ ಗ್ರಾಮಸ್ಥರು ನಿರಾಳವಾಗಿ ಉಸಿರಾಡುವಂತೆ ಮಾಡಿ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಲ್ಲಿ
ಮನವಿ ಮಾಡಿಕೊಂಡಿದ್ದರಿಂದ ಗುರುವಾರದಂದು ಗ್ರಾಮಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಕೋತಿಯನ್ನು ಬೋನಿನಲ್ಲಿ ಸೆರೆ ಹಿಡಿದುಕೊಂಡು ಹೋಗಿದ್ದಾರೆ.
ವರದಿ : ಭೀಮಣ್ಣ ಗಾಣಿಗೇರ