ಹಳಿ ಮೇಲೆ ಮದ್ಯ ಪಾನ ಸೇವಿಸುತ್ತಿದ್ದ ಮೂರು ಜನ ಯುವಕರ ಮೇಲೆ ಹರಿದ ರೈಲು.
ಗಂಗಾವತಿ: ಹಳಿಯ ಮೇಲೆ ಕುಳಿತು ಮದ್ಯ ಸೇವನೆ ಮಾಡುತ್ತಿದ್ದ ಮೂರು ಜನ ಯುವಕ ಮೇಲೆ ರೈಲು ಹರಿದು ಮೂರು ಜನರು ಸಾವನ್ನಪ್ಪಿರುವ ಘಟನೆ ಗಂಗಾವತಿಯ ಕನಕಗಿರಿ ರಸ್ತೆಯ ರೈಲ್ವೇ ಮಾರ್ಗದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಸುನೀಲ್ ಕುಮಾರ(೨೩), ವೆಂಕಟ್ (೨೦) , ಗಂಗಾವತಿಯ ಮೌನೇಶ(೨೩) ಶುಕ್ರವಾರ ರಾತ್ರಿ 9 ಗಂಟೆ ಸಮಯದಲ್ಲಿ ಕನಕಗಿರಿ ರಸ್ತೆಯಲ್ಲಿ ಇರುವ ರೈಲ್ವೇ ಹಳಿ ಮೇಲೆ ಕುಳಿತು ಮದ್ಯ ಸೇವನೆ ಮಾಡುತ್ತಿದ್ದ ಸಂದರ್ಭದಲ್ಲಿ ಹುಬ್ಬಳ್ಳಿ ಕಡೆಯಿಂದ ಆಗಮಿಸಿದ ರೈಲ್ವೇ ಮೂರು ಜನರ ಮೇಲೆ ಹರಿದಿದೆ.
ಇದರಿಂದ ಮೂರು ಜನರು ಸ್ಥಳದಲ್ಲಿ ಮೃತಪಟ್ಟಿದ್ದಾರೆ.ಸ್ಥಳದಲ್ಲಿ ಮದ್ಯದ ಬಾಟಲ್,ಮೊಬೈಲ್ ಹಾಗೂ ಕೆಲವು ತಿಂಡಿ ಪಾಕೇಟ್ ಗಳಿದ್ದು ಸ್ಥಳಕ್ಕೆ ರೈಲ್ವೇ ಇಲಾಖೆಯ ಪಿಎಸ್ಐ ಬಿ.ಎನ್.ರಾಮಣ್ಣ ನೇತೃತ್ವದ ರೈಲ್ವೇ ಪೊಲೀಸ್ ತಂಡ ಭೇಟಿ ನೀಡಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.






