Vishnuvardhan ಮನೆಯಲ್ಲಿ ವಿಷ್ಣುವರ್ಧನ ಮೂರ್ತಿ ನಿರ್ಮಿಸಿದ ಅಭಿಮಾನಿ
ಕನ್ನಡ ಚಿತ್ರರಂಗದ ಸಾಹಸಿಂಹ ವಿಷ್ಣುವರ್ಧನ ಅವರ ಅಭಿಮಾನಿ ಮನೆಯಲ್ಲಿ ೨ ಅಡಿಯ ವಿಷ್ಣುವರ್ಧನ
ಕಂಚಿನ ಮೂರ್ತಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಿ ದಿನನಿತ್ಯ ಪೂಜೆಯನ್ನು ಮಾಡುತ್ತಿದ್ದಾನೆ.
ಹೌದು ಬಾಗಲಕೋಟ ಜಿಲ್ಲೆಯ ಇಳಕಲ್‌ದ ವಾರ್ಡನಂ, ೦೨ ಸಾಲಪೇಟೆಯ ನಿವಾಸಿಯಾಗಿರುವ ಸತೀಶ ಮಡಿವಾಳರ
ತಮ್ಮ ಮನೆಯಲ್ಲಿ ಮೂರ್ತಿಯನ್ನು ನಿರ್ಮಿಸಿ ತಮ್ಮ ಅಭಿಮಾನವನ್ನು ಮೆರೆದಿದ್ದಾರೆ.
ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿಷ್ಣುವರ್ಧನ ಮೂರ್ತಿಯನ್ನು ವಿಷ್ಣು ಸೇನಾ ಸಂಘಟನೆಯ
ಜಿಲ್ಲಾಧ್ಯಕ್ಷ ಚಂದ್ರು ಅಪ್ಪಾಜಿ ಮತ್ತು ಕೃಷ್ಣಾ ಸಾಳುಂಕೆ ಅನಾವರಣ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ರಾಜೇಶ್ವರಿ ಮಡಿವಾಳರ, ಸಮೃದ್ಧ ಮಡಿವಾಳರ, ಸನ್ನಿತ್ ಮಡಿವಾಳರ, ತಿಪ್ಪಣ್ಣ ಮಡಿವಾಳರ,
ಟಿಪ್ಪು ನದಾಫ್, ಗುರುರಾಜ ವಗ್ಗ, ಶಶಿಧರ ಗುಂಜಳ್ಳಿ, ಸಂಗು ಅಭಿಗೇರ, ವಿಜಯ ಮಡಿವಾಳರ, ಸಂತೋಷ ಮಡಿವಾಳರ,
ಸುಪ್ರೀತ್ ಮಡಿವಾಳರ, ಗೋಪಿ ಲಕ್ಕುಂಡಿ ಮತ್ತು ವಿಷ್ಣು ಅಭಿಮಾನಿಗಳು ಇದ್ದರು.
ವರದಿ: ಭೀಮಣ್ಣ ಗಾಣಿಗೇರ (ಇಳಕಲ್ಲ)