Ilakal Cooperative Bank ಅಪಘಾತ ವಿಮೆ : ಇಳಕಲ್ ಕೋಆಪರೇಟಿವ್ ಬ್ಯಾಂಕ ವತಿಯಿಂದ ಹಣ ವಿತರಣೆ
ಇಳಕಲ್ : ಇಲ್ಲಿನ ಇಳಕಲ್ ಕೋಆಪರೇಟಿವ್ ಬ್ಯಾಂಕಿನ ಸದಸ್ಯರು ಅಪಘಾತದಲ್ಲಿ ಮರಣ ಹೊಂದಿದ್ದು ಅವರ ಕುಟುಂಬಕ್ಕೆ ಅಪಘಾತ ವಿಮೆ ಹಣವನ್ನು ಬುಧವಾರದಂದು ನಡೆದ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.
ಬ್ಯಾಂಕಿನ ಸದಸ್ಯರಾಗಿದ್ದ ಮಹಾಂತೇಶ ಕಳಕಪ್ಪ ಕಸ್ತೂರಿ ಮತ್ತು ಗುರುಪಾದೆಪ್ಪ ಅಮರೇಶಪ್ಪ ಕೆಂಗಲ್ಲ ಅಪಘಾತದಲ್ಲಿ ಮರಣ ಹೊಂದಿದ್ದರು. ಅವರ ಕುಟುಂಬ ವರ್ಗದ ಕೇಸೂರ ನೀಲಮ್ಮ ಮಹಾಂತೇಶ ಕಸ್ತೂರಿ ಮತ್ತು ಇಲ್ಯಾಳದ ಪಾರಮ್ಮ ಅಮರಪ್ಪ ಕೆಂಗಲ್ ಇವರಿಗೆ ತಲಾ ಒಂದು ಲಕ್ಷದ ಚೆಕ್ ಗಳನ್ನು ವಿತರಿಸಲಾಯಿತು.
ಈ ಸಮಯದಲ್ಲಿ ಬ್ಯಾಂಕಿನ ಅಧ್ಯಕ್ಷ ಅರವಿಂದ ಮಂಗಳೂರ, ಪಂಪಣ್ಣ ಕಾಳಗಿ,ಲಕ್ಷ್ಮಣ ಗುರಂ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ನಾಗರಾಜ ಕುಟಗಮರಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವರದಿ :ಭೀಮಣ್ಣ ಗಾಣಿಗೇರ (ಇಳಕಲ್ಲ)