ALAMATTI:ಆಲಮಟ್ಟಿ : ಗಂಗಾಪೂಜೆ-ಬಾಗಿನ ಸಮರ್ಪಿಸಿದ ಸಿಎಂ ಡಿಸಿಎಂ
ಬಾಗಲಕೋಟೆ : ಕನ್ನಡ ನಾಡಿನ ಪ್ರತಿಷ್ಠಿತ ಆಲಮಟ್ಟಿಯ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದಲ್ಲಿ ಗರಿಷ್ಠಮಟ್ಟದ ನೀರು
ಸಂಗ್ರಹಣೆಯಾಗಿರುವ ಹಿನ್ನೆಲೆಯಲ್ಲಿ ಬುಧವಾರದಂದು ಕೃಷ್ಣೆಯ ಜಲಧಿಗೆ ಗಂಗಾಪೂಜೆ ನೆರವೇರಿಸಿದರು.
ಭಕ್ತಿಯ ಬಾಗಿನ ಸಮರ್ಪಿಸುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ
ಡಿ ಕೆ ಶಿವಕುಮಾರ್ ಅವರೊಂದಿಗೆ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ
ಹುನಗುಂದ ಶಾಸಕ ವಿಜಯಾನಂದ ಎಸ್ ಕಾಶಪ್ಪನವರ ಹಾಗೂ ಸಚಿವ ಆರ್,ಬಿ,ತಿಮ್ಮಾಪೂರ, ಎಂ,ಬಿ,ಪಾಟೀಲ,
ಶಿವಾನಂದ ಪಾಟೀಲ, ಶಾಸಕ ಎಚ್,ವಾಯ್,ಮೇಟಿ, ಮತ್ತಿತರರು ಪಾಲ್ಗೊಂಡಿದ್ದರು.