ಮೌಲಾನಾ ಮೇಲೆ ಹಲ್ಲೆ ಆರೋಪ : ಠಾಣೆಗೆ ಸಮುದಾಯ ಮುತ್ತಿಗೆ
ಬಾಗಲಕೋಟೆ : ನವನಗರದಲ್ಲಿ ಯುವಕರ ಮಧ್ಯೆ ಉಂಟಾಗಿರುವ ಗಲಾಟೆಯಿಂದ ಆತಂಕದ ವಾತಾವರಣ ಕಂಡು ಬಂದಿದೆ.
ನವನಗರದ ೪ನೇ ಸೆಕ್ಟರ್ ನಲ್ಲಿ ಕೆಲ ಯುವಕರ ನಡುವೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಆಗಿದ್ದು, ಅದೇ ಸ್ಥಳದಲ್ಲಿ ನಡೆದುಕೊಂಡು
ಹೋಗುತ್ತಿದ್ದ ಮೌಲ್ವಿ ಒಬ್ಬರ ಮೇಲೆ ಯುವಕರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇದರಿಂದ ಉದ್ರಿಕ್ತಗೊಂಡ ಮುಸ್ಲಿಂ ಯುವಕರು ನವನಗರ ಠಾಣೆ ಮುಂದೆ ಜಮಾಯಿಸಿ ತಪ್ಪಿಸ್ಥರ ಬಂಧನಕ್ಕೆ ಒತ್ತಾಯಿಸಿದ್ದಾರೆ.
ಘಟನೆ ಕೋಮುಸ್ವರೂಪ ಪಡೆಯುತ್ತಿರುವುದನ್ನು ಅರಿತ ಪೊಲೀಸರು ನವನವರದಲ್ಲಿ ಬಿಗಿ ಬಂದೋಬಸ್ತ್ ಏರ್ಪಿಡಿಸಿದ್ದ,
ಗುಂಪುಗಳನ್ನು ಚದುರಿಸಿ ಮನೆಗೆ ಕಳುಹಿಸಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಹೆಚ್ಚುವರಿ ಎಸ್ಪಿಗಳಾದ ಮಹಾಂತೇಶ ಜಿದ್ದಿ, ಪ್ರಸನ್ನ ದೇಸಾಯಿ ಅವರು ನವನಗರ ಠಾಣೆಗೆ ದೌಡಾಯಿಸಿದ್ದು,
ಪ್ರಕರಣ ದಾಖಲಿಸಿಕೊಂಡು ತಪ್ಪಿತಸ್ಥರನ್ನು ಬಂಧಿಸುವ ಭರವಸೆ ನೀಡಿದ ನಂತರ ಠಾಣೆ ಮುಂದೆ ಜಮಾಯಿಸಿದವರು
ಸಮಾಧನಗೊಂಡು ತಮ್ಮ ಸ್ಥಳಗಳಿಗೆ ಮರಳಿದ್ದಾರೆ. ಘಟನೆ ಸಂಬAಧ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿರುವ ಮಾಹಿತಿ ಲಭ್ಯವಾಗಿದೆ.