ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ಆರೋಪ; ಹನ್ನೊಂದು ಯುವತಿಯರ ರಕ್ಷಣೆ
ಬಾಗಲಕೋಟ ಜಿಲ್ಲೆಯ ಮುಧೋಳದಲ್ಲಿ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ಆರೋಪದ ಹಿನ್ನೆಲೆ ಪೊಲೀಸರು ದಾಳಿ ನಡೆಸಿ ಹನ್ನೊಂದು ಜನ ಯುವತಿಯರ ರಕ್ಷಣೆ ಮಾಡಿದ ಘಟನೆ ಜರುಗಿದೆ.
ಮುಧೋಳ ನಗರದ ನಾಲ್ಕು ಲಾಡ್ಜ್’ಗಳ ಮೇಲೆ ದಾಳಿ ನಡೆಸಲಾಗಿದೆ.ಡಿವೈ ಎಸ್ಪಿ ಶಾಂತವೀರ ಅವರವನೇತೃತ್ವದಲ್ಲಿ ಮುಧೋಳ ಸಿಪಿಐ,ಇಬ್ಬರು ಪಿ.ಎಸ್.ಐ ಸೇರಿ ನಾಲ್ಕು ತಂಡಗಳು ವಿವಿಧೆಡೆ ದಾಳಿ ನಡೆಸಿವೆ.
ನಾಲ್ಕು ತಂಡಗಳಿAದ ಏಕಕಾಲಕ್ಕೆ ದಾಳಿ ನಡೆದಿದೆ.೨೬,೨೮,೩೦ ವಯಸ್ಸಿನ ಆಸ್ಸಾಂ,ಕಲ್ಕತ್ತ,ಮುAಬೈ ಮೂಲದ ಯುವತಿಯರನ್ನ ರಕ್ಷಣೆ ಮಾಡಲಾಗಿದೆ.
ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪ್ರಕರಣ ದಾಖಲಿಸಿರುವ ಪೊಲೀಸರು ತನುಖೆಯನ್ನ ಮುಂದುವರೆಸಿದ್ದಾರೆ.