ಕಂದಗಲ್ಲಗೆ ಪಿ.ಯು ಕಾಲೇಜು ಮಂಜೂರು ಮಾಡಿ : ಡಾ ಮಲ್ಲಿಕಾರ್ಜುನ ಗಡಿಯಣ್ಣವರ ಮನವಿ
ಇಳಕಲ್ಲ: ತಾಲೂಕಿನ ಕಂದಗಲ್ಲ ಗ್ರಾಮಕ್ಕೆ ಸರಕಾರಿ ಪದವಿ ಪೂರ್ವ ಕಾಲೇಜು ಮಂಜೂರು ಮಾಡಬೆಕೆಂದು ಇಲಕಲ್ಲ ಹಾಗೂ ಹುನಗುಂದ ತಾಲೂಕಿನ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಡಾ ಮಲ್ಲಿಕಾರ್ಜುನ ಗಡಿಯಣ್ಣವರ ಮನವಿ ಮಾಡಿಕೊಂಡಿದ್ದಾರೆ.
ಕಂದಗಲ್ಲ ಗ್ರಾಮ ಇಲಕಲ್ಲ ತಾಲೂಕಿನಲ್ಲಿಯೆ ದೊಡ್ಡ ಗ್ರಾಮವಾಗಿದೆ ೧೨ ಸಾವಿರ ಕಿಂತಲೂ ಅಧೀಕ ಜನಸಂಖ್ಯವುಳ್ಳ ಈ ಗ್ರಾಮಕ್ಕೆ ೧೯೬೬ರಲ್ಲಿ ಸರಕಾರಿ ಪ್ರೌಡಶಾಲೆ ಪ್ರಾರಂಭವಾಗಿದ್ದಕ್ಕೆ ೫೮ವರ್ಷಗಳು ಸಂದಿಸಿವೆ ಆದರೆ ಇನ್ನೂವರೆಗೂ ಪಿ ಯು ಕಾಲೇಜು ಇಲ್ಲದ್ದರಿಂದ ಈ ಬಾಗ ಶೈಕ್ಷಣಿಕವಾಗಿ ಹಿಂದುಳಿದಿದೆ, ಕಂದಗಲ್ಲಿಗೆ ಸರಕಾರಿ ಪದವಿಪೂರ್ವ ಕಾಲೇಜು ಮಂಜೂರು ಮಾಡಬೆಕೆಂದು ಹಿಂದೆ ಆಗಿ ಹೊದ ಅನೇಕ ಶಿಕ್ಷಣ ಸಚಿವರಿಗೆ, ಶಾಸಕರಿಗೆ ಮನವಿ ನೀಡಿದರು ಇದುವರೆಗೆ ಮನವಿಗೆ ಸ್ಪಂದನೆ ದೊರೆತಿಲ್ಲ ದಿರುವದರಿಂದ ಗ್ರಾಮಸ್ಥರಿಗೆ ಅಸಮಾಧಾನ ತಂದಿದೆ.
ಕಂದಗಲ್ಲದಲ್ಲಿ ಸರಕಾರಿ ಪ್ರೌಡಶಾಲೆ ಹಾಗೂ ಸಜ್ಜಲಶ್ರೀ ಪ್ರೌಡ ಶಾಲೆಗಳಿಗೆ ಪ್ರತಿವರ್ಷ ೧೦೦ ಕ್ಕೂ ಹೆಚ್ಚು ವಿದ್ಯಾರ್ಥಿನಿಗಳು SSಐಅ ಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತೇರ್ಗಡೆ ಯಾಗುತ್ತಾರೆ ವಿದ್ಯಾರ್ಥಿನಿಯರನ್ನು ಮುಂದಿನ ವಿಧ್ಯಾಭ್ಯಾಸಕ್ಕೆ ಪೋಷಕರು ಪಟ್ಟಣಕ್ಕೆ ಕಳುಹಿಸಲು ಹಿಂಜರಿಯುತ್ತಾರೆ ಅನೇಕ ಪ್ರತಿಭಾವಂತ ವಿಧ್ಯಾರ್ಥಿನಿಯರು ಶಿಕ್ಷಣ ಮೊಟಕುಗೊಳಿಸುತ್ತಿದ್ದಾರೆ.
ಇಗಾಗಿ ಕಂದಗಲ್ಲಿನ ಭಾಗದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹಿನ್ನಡೆಯಾಗಿದೆ, ಪ್ರಸ್ತುತ ವರ್ಷ ಕಂದಗಲ್ಲಗ್ರಾಮದ ೨೦೦ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ನಲ್ಲಿ ಪಾಸಾಗಿದ್ದಾರೆ ಕಾರಣ ಈ ವರ್ಷದಿಂದಲೆ ಪಿ ಯು ಕಾಲೇಜು ಮಂಜೂರ ಮಾಡಬೆಕೆಂದು ಶಿಕ್ಷಣ ಸಚಿವರಲ್ಲಿ ಆಗ್ರಹ ಮಾಡಿದ್ದಾರೆ.
Related