2024ರ ಲೋಕಸಭೆ ಚುನಾವಣೆಗೆ ಕೊಯಮತ್ತೂರಿನಿಂದ ಅಣ್ಣಾಮಲೈ ಕಣಕ್ಕೆ.
ಚೆನ್ನೈ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ತಮಿಳುನಾಡಿಗೆ ಸಂಬಂಧಿಸಿ ಗುರುವಾರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಕೊಯಮತ್ತೂರು, ತೆಲು0ಗಾಣ ಮಾಜಿ ರಾಜ್ಯಪಾಲೆ ತಮಿಳಿಸೈ ಚೆನ್ನೈ ದಕ್ಷಿ ಣದಿಂದ ಸ್ಪರ್ಧಿಸಲಿದ್ದಾರೆ.
ಕೆ.ಅಣ್ಣಾಮಲೈ. ಈ ಹೆಸರು ಕೇಳ್ತಿದ್ರೆ ಲಕ್ಷಾಂತರ ಯುವಕರು ರೋಮಾಂಚನಗೊಳ್ತಾರೆ. ಕರ್ನಾಟಕದಲ್ಲಿ ಈ ಹೆಸರನ್ನ ಕೇಳದವ್ರು ತುಂಬಾನೆ ಕಡಿಮೆ . ಇನ್ನು ತಮಿಳುನಾಡಲ್ಲಿ ಇವರ ಒಂದು ಕರೆಗೆ ಸಹಸ್ರರು ಮಂದಿ ಸೇರ್ತಾರೆ. ದ್ರಾವಿಡ ನಾಡಲ್ಲಿ ಬಿಜೆಪಿಯ ಬೇರುಗಳು ಇಳಿಯೋದಕ್ಕೆ ಸಾಧ್ಯವೇ ಇಲ್ಲ ಅಂತಿದ್ದವ್ರೆಲ್ಲ ಮೂಗಿನ ಮೇಲೆ ಬೆರಳಿಡುವಂತೆ ಆಗಿದೆ. ಅದಕ್ಕೆ ಕಾರಣ ದ್ರಾವಿಡ ನಾಡಲ್ಲಿ ಹೆಚ್ಚಾಗುತ್ತಿರುವ ಅಣ್ಣಾಮಲೈ ಜನಪ್ರಿಯತೆ.
ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕರ್ನಾಟಕದಲ್ಲಿ ಕಾರ್ಯನಿರ್ವಹಿಸಿದ ಕೆಲವೇ ಕೆಲವು ನಿಷ್ಟಾವಂತ ಹಾಗೂ ಪ್ರಾಮಾಣಿಕ ಪೊಲೀಸ್ ಆಧಿಕಾರಿಗಳಲ್ಲಿ ಒಬ್ರು. ಇಲಾಖೆಯೊಳಗಿನ ಭ್ರಷ್ಟಾಚಾರ ಹಾಗೂ ಅಶಿಸ್ತನ್ನೂ ಪ್ರಶ್ನಿಸಿದವರು ಅಣ್ಣಾಮಲೈ. ಇಲಾಖೆಯ ಸಿಬ್ಬಂದಿ ಮೇಲೆ ಯಾರಾದ್ರೂ ದಾಳಿ ಮಾಡೋದಕ್ಕೆ ಬಂದ್ರೆ, ಗಲಭೆಗಳ ಸಂದರ್ಭದಲ್ಲಿ ಪೊಲೀಸ್ರನ್ನ ನಿಂಧಿಸೋದಕ್ಕೆ ಬಂದ್ರೆ ಅಣ್ಣಾಮಲೈ ಅದಕ್ಕೆ ಅವಕಾಶ ಕೊಡ್ತಿರಲಿಲ್ಲ.
ತಮ್ಮ ಕಾರ್ಯ ವೈಖರಿಯಿಂದ ಕರ್ನಾಟಕದ ‘ಸಿಂಗಂ’ ಅನ್ನಿಸಿಕೊಂಡಿದ್ದ ಅಣ್ಣಾಮಲೈ, ಇದ್ದಕ್ಕಿದ್ದಂತೆ ರಾಜಿನಾಮೆ ಕೊಟ್ಟು, ಕೃಷಿಕನಾಗ್ತಾನೆ ಅಂತ ಹೊರಟು ಬಿಟ್ರು! ಇದ್ದಕ್ಕಿದ್ದ ಹಾಗೇ ರಾಜೀನಾಮೆ ಕೊಡೋವಂತದ್ದು ಏನಾಯ್ತು ಅನ್ನೋ ಪ್ರಶ್ನೆಗೆ ಇನ್ನೂ ಉತ್ತರ ಕೂಡಾ ಸಿಕ್ಕಿರಲಿಲ್ಲ. ಅಷ್ಟರಲ್ಲಾಗಲೇ ತಮಿಳುನಾಡಿನಿಂದ ಅಚ್ಚರಿಯ ಸುದ್ದಿಯೊಂದು ಹೊರ ಬಿದ್ದಿತ್ತು. ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಬಿಜೆಪಿ ಪಕ್ಷವನ್ನ ಸೇರಿದ್ರು. ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಸೋಲನ್ನೂ ಕಂಡ್ರು. ಆ ನಂತರದಲ್ಲಿ ತಮಿಳುನಾಡಿನ ಬಿಜೆಪಿಯ ಅಧ್ಯಕ್ಷರಾದ್ರು. ಈಗ 2024 ಲೋಕಸಭೆ ಚುನಾವಣೆ ಕೊಯಮತ್ತೂರಿನಿಂದ ಅಣ್ಣಾಮಲೈ ಸ್ಪರ್ಧಿಸಲಿದ್ದಾರೆ.
source; media masters