died ಇಳಕಲ್ ನಗರದಲ್ಲಿ ಮತ್ತೊಂದು ಘಟನೆ : ಮಲಗಿದ್ದಲ್ಲಿಯೇ ಪ್ರಾಣ ಬಿಟ್ಟ ವ್ಯಕ್ತಿ
ಬಾಗಲಕೋಟೆ : ಜಿಲ್ಲೆಯ ಇಳಕಲ್ ನಗರದ ಸ್ಮಶಾನಕ್ಕೆ ಹೋಗುವ ದಾರಿಯಲ್ಲಿನ ಬಿಸ್ಮಿಲ್ಲಾ ಹೋಟೆಲ್ ಮುಂಭಾಗದಲ್ಲಿ ವ್ಯಕ್ತಿಯೋರ್ವ ಮಲಗಿಕೊಂಡಿದಲ್ಲಿಯೇ ಪ್ರಾಣ ಬಿಟ್ಟ ಘಟನೆ ಬುಧವಾರ ರಾತ್ರಿ ೮ ಗಂಟೆಗೆ ಬೆಳಕಿಗೆ ಬಂದಿದೆ.
ಮೃತ ವ್ಯಕ್ತಿ ನವನಗರದ ಗೌಳೇರ ಗುಡಿಯ ನಿವಾಸಿ ರವಿ ಹಾಲಪ್ಪನವರ್ (45) ಎಂದು ಗುರುತಿಸಲಾಗಿದೆ.ಮೃತಪಟ್ಟವ್ಯಕ್ತಿಯು ಸರಾಯಿ ಸೇವಿಸಿ ಮಲಗಿಕೊಂಡಿದ್ದ ಎನ್ನಲಾಗಿದೆ.
ಸ್ಥಳಕ್ಕೆ ಶಹರ್ ಪೋಲಿಸ್ ಠಾಣೆಯ ಪಿಎಸ್ಐ ಎಸ್.ಆರ್.ನಾಯಕ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ವ್ಯಕ್ತಿಯ ಸಾವಿನಲ್ಲಿ ಯಾವುದೇ ಸಂಶಯವಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ ಎನ್ನಲಾಗಿದೆ.
ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ)